ಕರ್ನಾಟಕಪ್ರಮುಖ ಸುದ್ದಿ

ಎಸ್‍ಬಿಐ : ವಿಲೀನವಾದ ಬ್ಯಾಂಕ್‍ ಗ್ರಾಹಕರ ಚೆಕ್‍ಬುಕ್‍, ಪಾಸ್‍ಬುಕ್‍, ನೆಟ್‍ಬ್ಯಾಂಕಿಂಗ್‍ ನವೀರಕಣಕ್ಕೆ ಸೂಚನೆ

ಬೆಂಗಳೂರು, ಸೆ.18 : ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – ಎಸ್‍ಬಿಐ ಜೊತೆ ವಿಲೀನವಾದ ಬ್ಯಾಂಕುಗಳ ಹಳೆ ಚೆಕ್ ಬುಕ್, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ, ಡೆಬಿಟ್‍ಕಾರ್ಡ್‍ಗಳನ್ನು ಅನ್ನು ಗ್ರಾಹಕರು ನವೀಕರಿಸಿಕೊಳ್ಳಬೇಕಾಗಿದೆ.

ಈ ಕುರಿತು ಅಧೀನ ಬ್ಯಾಂಕ್‍ಗಳ ಗ್ರಾಹಕರಾಗಿದ್ದು ವಿಲೀನದ ಪರಿಣಾಮ ಇದೀಗ ಎಸ್‍ಬಿಐ ಗ್ರಾಹಕರಾಗಿ ಬದಲಾಗಿರುವ ಖಾತೆದಾರರಿಗೆ ಸೂಚನೆ ನೀಡುವಂತೆ ಎಸ್‍ಬಿಐ ಕೇಂದ್ರ ಆಡಳಿತ ನಿರ್ದೇಶನ ನೀಡಿದೆ. ಈ ನಿರ್ದೇಶನದಂತೆ ಸ್ಟೇಟ್‍ ಬ್ಯಾಂಕ್ ಆಫ್ ಮೈಸೂರಿನಲ್ಲಿ ಖಾತೆ ಹೊಂದಿದ್ದ ಗ್ರಾಹಕರು ಸೆಪ್ಟೆಂಬರ್ 30ರ ನಂತರ ಹಳೆ ಚೆಕ್‍ಬುಕ್ ಬಳಸಲು ಸಾಧ್ಯವಿಲ್ಲ. ಸ್ಟೇಟ್‍ ಬ್ಯಾಂಕ್ ಸಮೂಹ ಮಾತ್ರವಲ್ಲದೆ ಭಾರತೀಯ ಮಹಿಳಾ ಬ್ಯಾಂಕಿಗೂ ಈ ನಿಯಮ ಅನ್ವಯವಾಗಲಿದೆ.

ಎಸ್‍ಬಿಬಿಜೆ, ಎಸ್‍ಬಿಹೆಚ್, ಎಸ್‍ಬಿಎಂ, ಎಸ್‍ಬಿಪಿ, ಎಸ್‍ಬಿಟಿ ಹಾಗೂ ಭಾರತೀಯ ಮಹಿಳಾ ಬ್ಯಾಂಕ್‍ಗಳ ಗ್ರಾಹಕರು ತಮ್ಮ ಬಳಿ ಇರುವ ಚೆಕ್ ಬುಕ್ ಕೂಡಲೇ ಬದಲಾಯಿಸಿಕೊಳ್ಳಬೇಕಾಗಿ ಸೂಚಿಸಲಾಗಿದೆ. ಹಳೆ ಚೆಕ್ ಬುಕ್, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ, ಡೆಬಿಟ್‍ಕಾರ್ಡ್‍ಗಳನ್ನು ಮತ್ತೊಮ್ಮೆ ನವೀಕರಿಸಲು ಕೋರಲಾಗಿದೆ.

ಇದರಂತೆ ಸ್ಟೇಟ್‍ಬ್ಯಾಂಕ್ ಆಫ್ ಮೈಸೂರು ಖಾತೆ ಹೊಂದಿದ್ದ ಗ್ರಾಹಕರು ಈಗ ಎಸ್‍ಬಿಐನ ತಮ್ಮ ಶಾಖೆಗೆ ತೆರಳಿ ಅರ್ಜಿ ಸಲ್ಲಿಸಿ ಚೆಕ್ ಬುಕ್ ಮತ್ತು ಇತರೆ ಎಲ್ಲ ದಾಖಲೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. 2017 ರ ಏಪ್ರಿಲ್‍ನಲ್ಲಿ ಅಧೀನ ಬ್ಯಾಂಕುಗಳ ಜತೆ ಪ್ರಾಂತೀಯ ಸ್ಟೇಟ್‍ಬ್ಯಾಂಕ್‍ಗಳನ್ನು ವಿಲೀನಗೊಳಿಸಲಾತ್ತು.

(ಎನ್.ಬಿ)

Leave a Reply

comments

Related Articles

error: