ಮೈಸೂರು

ಪಿ.ಎಫ್.ಐ, ಕೆ.ಎಫ್.ಡಿ, ಎಸ್.ಡಿ.ಪಿ.ಐ ಸಂಘಟನೆಗಳನ್ನು ನಿಷೇಧಕ್ಕೆ ಒತ್ತಾಯ

ಕರ್ನಾಟಕದಲ್ಲಿ ನಿರಂತರ ಹಿಂದೂ ಸಂಘಟನೆಗಳ ಮೇಲೆ ದಾಳಿಗಳನ್ನು ನಡೆಸುತ್ತಿರುವ ಪಿ.ಎಫ್.ಐ, ಕೆ.ಎಫ್.ಡಿ, ಎಸ್.ಡಿ.ಪಿ.ಐ ಸಂಘಟನೆಗಳನ್ನು ನಿಷೇಧಿಸುವಂತೆ ಭಾರತೀಯ ಜನತಾಪಕ್ಷದ ಮೈಸೂರು ನಗರಾಧ್ಯಕ್ಷ ಡಾ.ಮಂಜುನಾಥ ಒತ್ತಾಯಿಸಿದರು.

ಮೈಸೂರು ಜಿಲ್ಲಾ ನ್ಯಾಯಾಲಯದ ಗಾಂಧಿ ಪ್ರತಿಮೆ ಎದುರು ಭಾರತೀಯ ಜನತಾಪಕ್ಷದ ಯುವಮೋರ್ಚಾ ವತಿಯಿಂದ ಶನಿವಾರ ಪಿ.ಎಫ್.ಐ, ಕೆ.ಎಫ್.ಡಿ, ಎಸ್.ಡಿ.ಪಿ.ಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಡಾ. ಮಂಜುನಾಥ ಮಾತನಾಡಿ ಬೆಂಗಳೂರಿನಲ್ಲಿ ಆರ್.ಎಸ್.ಎಸ್.ಕಾರ್ಯಕರ್ತ ರುದ್ರೇಶ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ ವ್ಯಕ್ತಿಗಳು ಎಸ್.ಡಿ.ಪಿ.ಐ ಸಂಘಟನೆಯ ಕಾರ್ಯಕರ್ತರು ಎಂದು ತಿಳಿದು ಬಂದಿದೆ. ಕೇರಳದಲ್ಲಿ ತರಬೇತಿ ಪಡೆದವರೆಂದು ಹೇಳಲಾಗುತ್ತಿದೆ. ಮೂಡಬಿದಿರೆಯ  ಭಜರಂಗದಳದ ಕಾರ್ಯಕರ್ತರಾಗಿದ್ದ ಪ್ರಶಾಂತಪೂಜಾರಿಯ ಹತ್ಯೆ ಪ್ರಕರಣದಲ್ಲಿ ಬಂಧಿತರಾದ ಎಂಟು ಮಂದಿ ಆರೋಪಿಗಳು ಪಿ.ಎಫ್.ಐ ಸಂಘಟನೆಯ ಸಕ್ರೀಯ ಕಾರ್ಯಕರ್ತರೆಂದು ಪೊಲೀಸರು  ಈ ಹಿಂದೆ ತಿಳಿಸಿದ್ದಾರೆ. ಇದೇ ರೀತಿ ಪಕ್ಕದ ರಾಜ್ಯ ಕೇರಳದಲ್ಲೂ ಅನೇಕ ರೀತಿಯ ದುಷ್ಕೃತ್ಯದಲ್ಲಿ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಕಾರ್ಯಕರ್ತರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅದರಿಂದ ದುಷ್ಕೃತ್ಯದಲ್ಲಿ ತೊಡಗಿಸಿಕೊಂಡಿರುವ  ಇಂತಹ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಗರ ಯುವ ಮೋರ್ಚಾ ಅಧ್ಯಕ್ಷರಾದ ಕೆ.ಗೋಕುಲ್ ಗೋವರ್ಧನ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಸಂಪತ್, ಬಿ.ಸೋಮಶೇಖರ್, ರಾಜ್ಯ ಕಾರ್ಯದರ್ಶಿ ಕೆ.ದೇವರಾಜ್, ರಾಜ್ಯ ಕಾರ್ಯಕಾರಿ ಸದಸ್ಯ ಬದ್ರೀಶ್  ಸೇರಿದಂತೆ ಯುವ ಮೋರ್ಚಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

comments

Related Articles

error: