ಮೈಸೂರು

ಪಟಾಕಿ ಬಳಸದಿರಿ-ಹಣತೆ ಉಪಯೋಗಿಸಿ: ಮನೆಮನೆಗೆ ತೆರಳಿ ಅರಿವು ಮೂಡಿಸಿದ ರಾಮದಾಸ್

deepa-web-2ಶಬ್ದ ರಹಿತ ದೀಪಾವಳಿಯನ್ನು ಬೆಳಕಿನೊಂದಿಗೆ ಆರಂಭಿಸೋಣ ಎನ್ನುವ ಕುರಿತು ಬೆಳಕು ಸಂಸ್ಥೆಯ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಶನಿವಾರ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ  ಮಾಜಿ ಸಚಿವ ಎಸ್.ಎ. ರಾಮದಾಸ್ ಅಗ್ರಹಾರದಲ್ಲಿನ ಮನೆ ಮನೆಗೆ ತೆರಳಿ ಹಣತೆ ನೀಡುವ ಮೂಲಕ ಅರಿವು ಮೂಡಿಸಿದರು.

ದೀಪಾವಳಿ ಬೆಳಕಿನ ಹಬ್ಬ. ಆದ್ದರಿಂದ ಪ್ರತಿಯೊಂದು ಮನೆಯಲ್ಲೂ ದೀಪೋತ್ಸವವನ್ನು ಆಚರಿಸಬೇಕು. ಪಟಾಕಿಗಳ ಬಳಕೆ ಬೇಡ. ಮಣ್ಣಿನ ದೀಪಗಳನ್ನು ಬಳಸಿ ಮನೆಯನ್ನು ಬೆಳಗಿಸಿ. ಬಾಹ್ಯ ಬೆಳಕಿಗಿಂತ ಆಂತರಿಕ ಬೆಳಕು ಮುಖ್ಯ. ಪಟಾಕಿಗಳಿಂದ ಉಂಟಾಗುವ ಅನಾಹುತಗಳ ಬಗ್ಗೆ, ವಾಯುಮಾಲಿನ್ಯದ ಬಗ್ಗೆ ಮಕ್ಕಳಿಗೆ ಮತ್ತು ಜನಸಾಮಾನ್ಯರಿಗೆ ಮನೆಮನೆಗೆ ತೆರಳಿ ಹಣತೆ ನೀಡುವ ಮೂಲಕ ಅರಿವು ಮೂಡಿಸುತ್ತಿದ್ದೇವೆ. ನೆರೆಯ ರಾಷ್ಟ್ರವಾದ ಚೀನಾದಿಂದ ತರಿಸಲಾಗುವ ಪಟಾಕಿಗಳನ್ನು ಉಪಯೋಗಿಸದೇ, ನಮ್ಮ ಕುಂಬಾರರು ತಯಾರಿಸಿದ ಹಣತೆಯನ್ನು ಉಪಯೋಗಿಸಿ ಅವರ ಪರಿಶ್ರಮಕ್ಕೆ ಲಾಭವನ್ನು ತಂದುಕೊಡಬೇಕು ಎಂದು ಹೇಳಿದರು.

ಅಗ್ರಹಾರದ ಶಂಕರಾದಿಮಠ, ಉತ್ತರಾದಿ ಮಠ, ಶ‍್ರೀರಾಮ ರಸ್ತೆ, ಕುಂದೂರು ರಸ್ತೆ, ರಾಮಾನುಜ ರಸ್ತೆ, ವಾರ್ಡ್ ನಂ 1 ಹಾಗೂ ಆಸುಪಾಸಿನ ಮನೆಗಳಿಗೆ ತೆರಳಿ ಮಣ್ಣಿನ ದೀಪಗಳನ್ನು ನೀಡಿ ಜಾಗೃತಿ ಮೂಡಿಸಿದರು. ಸುಮಾರು 1000 ಮನೆಗಳಿಗೆ 2000 ದೀಪಗಳನ್ನು ನೀಡಿದರು. ಬೆಳಕು ಸಂಸ‍್ಥೆಯ ಸಂಚಾಲಕ ಕೆ.ಎಂ.ನಿಶಾಂತ್, ಸದಸ್ಯ ವಾದಿರಾಜ್ ಬಲ್ಲಾಳ್, ಜ್ಯೋತಿ ಪ್ರಕಾಶ್, ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ರವಿಶಂಕರ್ ಶರ್ಮ ಇನ್ನಿತರರು ಮಾಜಿ ಸಚಿವರಿಗೆ ಸಾಥ್ ನೀಡಿದರು.

Leave a Reply

comments

Related Articles

error: