ಮೈಸೂರು

ಸ್ವಚ್ಛ ಮೈಸೂರು ‘ಸಿಟಿಜನ್ ಆ್ಯಪ್ ‘ ಡೌನ್ ಲೋಡ್ ಮಾಡಿಕೊಳ್ಳಿ

ಬಡಾವಣೆಯಲ್ಲಿ ನೀರಿನ ಸಮಸ್ಯೆಯೇ.. ಸರಿಯಾಗಿ ಕಸ ವಿಲೇವಾರಿಯಾಗುತ್ತಿಲ್ಲವೇ.. ಚರಂಡಿ ಕಟ್ಟಿದೆಯೇ.. ಚಿಂತೆ ಬಿಡಿ ಮೊಬೈಲ್ ಮೂಲಕ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ, ಸಮಸ್ಯೆಯನ್ನು ಅಥವಾ ಕುಂದು ಕೊರತೆಯನ್ನು ಮಹಾನಗರ ಪಾಲಿಕೆಗೆ ಮೊಬೈಲ್ ಆ್ಯಪ್ ಮೂಲಕ ಸುಲಭವಾಗಿ ತಲುಪಿಸಬಹುದು.

ನಗರದಲ್ಲಿ ಚರಂಡಿ ಸ್ವಚ್ಛತೆ, ಕಸ ಸಮಸ್ಯೆ, ರಸ್ತೆ ದುರಸ್ತಿ ಸೇರಿದಂತೆ ಸಾರ್ವಜನಿಕರ ಕುಂದುಕೊರತೆಗಳಿದ್ದಲ್ಲಿ Citizen swachata App ಅನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿ ದೂರುಗಳನ್ನು ಅಪ್ ಲೋಡ್ ಮಾಡಬಹುದು.

ಸ್ವಚ್ಛ ಭಾರತ ಮಿಷನ್ ಸಿಟಿ ರ್ಯಾಂಕಿಂಗ್ ಸಂಬಂಧಿಸಿದಂತೆ 2017 ಜನವರಿಯಲ್ಲಿ ನಡೆಯಲಿರುವ ಸ್ವಚ್ಛ  ಸರ್ವೇಕ್ಷಣ್ ಮೌಲ್ಯಮಾಪನದಲ್ಲಿ Swachhta Appಗೆ ಶೇ.50 ಹಾಗೂ ನಾಗರಿಕರ ಪ್ರತಿಕ್ರಿಯೆಗೆ ಶೇ.30ರಷ್ಟು ಪ್ರಾಮುಖ್ಯತೆಯನ್ನು ನೀಡಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ದೂರನ್ನು ಈ ಆ್ಯಪ್ ಮೂಲಕವೇ ಕಳುಹಿಸಬಹುದು ಎಂದು ಪಾಲಿಕೆ ಆಯುಕ್ತ ಬಿ.ಎಲ್.ಭೈರಪ್ಪ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸ್ವಚ್ಚ ಭಾರತ ಮಿಷನ್ ನ ವೆಬ್ ಸೈಟ್ www.swachhabharaturban.gov.in ನೋಡಬಹುದು.

Leave a Reply

comments

Related Articles

error: