ಸುದ್ದಿ ಸಂಕ್ಷಿಪ್ತ

ನವರಾತ್ರಿಯಂಗವಾಗಿ ಸೆ.21 -29ರವರೆಗೆ ಪ್ರತಿ ದಿನ ವಿಶೇಷ ಹೋಮ ಹವನಗಳು

ಮೈಸೂರು,ಸೆ.18 : ತ್ರಯೀನ್ಯಾಸ್ ಶ್ರೀವಿದ್ಯಾ ಫೌಂಡೇಶನ್ ವತಿಯಿಂದ 21ನೇ ವರ್ಷದ ಶರನ್ನವರಾತ್ರಿ ಮಹೋತ್ಸವವನ್ನು ಸೆ.21ರಿಂದ 29ರವರೆಗೆ ಹಮ್ಮಿಕೊಂಡಿದೆ.

ಸೆ.21ರಂದು 29ರವರೆಗೆ ಪ್ರತಿ ದಿನ ಬೆಳಗ್ಗೆ ವಿಶೇಷ ಪೂಜೆಗಳು ಹಾಗೂ ಸಂಜೆ 5.30ರಿಂದ ಹೋಮ ಹವನಾದಿಗಳನ್ನು ಜಯಲಕ್ಷ್ಮೀಪುರಂನ ತ್ರಯೀನ್ಯಾಸ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದೆ.

ಸೆ.21 ಮಹಾಧನ್ವಂತಿ ಹೋಮ, ಸೆ.22. ಶ್ರೀಮಹಾ ಪ್ರತ್ಯಂಗೀರ ಹೋಮ, ಸೆ.23. ದಶಾವತಾರ ಮಹಾವಿಷ್ಣು ಹೋಮ, ಸೆ.24. ದಶಗಣಪತಿ ಹೋಮ, ಸೆ.25ರ ಲಲಿತಾ ಪಂಚಮಿ ಪ್ರಯುಕ್ತ ದಶಮಹಾವಿದ್ಯಾ ಹೋಮ ಮತ್ತು ಲಲಿತಾ ಮಹಾಯಾಗ, ಶ್ರೀ ಅಷ್ಟವಾರಾಹಿ ಮತ್ತು ಶ್ರೀಮಹಾವಾರಾಹಿ ಆವರಣಾಂಗ ಹೋಮ, ದಶ ಶ್ಯಾಮಲಾ ಹೋಮ, ಶ್ರೀವಿದ್ಯಾ ಷೋಡಶ ದುರ್ಗಾ ಹೋಮ ಹಾಗೂ ಶ್ರೀವಾಂಛಾಕಲ್ಪಲತಾ ವಿದ್ಯಾಗಣೇಶ ಹೋಮವನ್ನು ಅನುಕ್ರಮವಾಗಿ ಸೆ.21 ರಿಂದ 29ರವರೆಗೆ ಆಯೋಜಿಸಲಾಗಿದೆ. ಸೆ.29ರಂದು ವಿಶೇಷವಾಗಿ ಸಗ್ರಹಮುಖ ನವಚಂಡಿಯಾಗವನ್ನು ನಡೆಸಲಾಗುತ್ತಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿದ್ಯಾ ಫೌಂಡೇಶನ್ ಕೋರಿದೆ. (ಕೆ.ಎಂ.ಆರ್)

Leave a Reply

comments

Related Articles

error: