ಮೈಸೂರು

ನಾಗರಿಕ ಸೇವೆಗಳಿಗೆ ಉಚಿತ ಕಾರ್ಯಾಗಾರ : ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮ

ಮೈಸೂರಿನ ಕಲಾಮಂದಿರದಲ್ಲಿ ಶನಿವಾರ ಕೇಂದ್ರ ನಾಗರಿಕ ಸೇವೆಗಳಾದ ಐಎಎಸ್, ಐಪಿಎಸ್, ಐಆರ್ ಎಸ್, ಐಎಫ್ ಎಸ್ ಪರೀಕ್ಷೆಗಳಿಗೆ ಒಂದು ದಿನದ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರವನ್ನು ಖ್ಯಾತ ಚಲನಚಿತ್ರ ನಟ ರಾಘವೇಂದ್ರ ರಾಜ್ ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂತಹ ಕಾರ್ಯಾಗಾರಗಳ ಸದವಕಾಶವನ್ನು ಅಭ್ಯರ್ಥಿಗಳು ಪಡೆದುಕೊಳ್ಳಬೇಕು ಎಂದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಇನ್ ಕಮ್ ಟ್ಯಾಕ್ಸ್ ನ ಡೆಪ್ಯೂಟಿ ಕಮೀಷನರ್ ಅಶ್ವಿನ್ ಡಿ.ಗೌಡ, ಅಸಿಸ್ಟೆಂಟ್ ಕಮೀಷನರ್ ಶ್ಯಾಮಲ ಡಿ.ಡಿ, ಅಸಿಸ್ಟೆಂಟ್ ಕಮೀಷನರ್ ಕಸ್ಟಮ್ಸ್& ಎಕ್ಸೈಸ್ ಡಾ.ಪ್ರದೀಪ್ ಆರ್, ಮಹಾರಾಣಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಹೇಮಚಂದ್ರ ಪಿ.ಎನ್ ಪಾಲ್ಗೊಂಡಿದ್ದರು.

ಚಲನಚಿತ್ರನಟ ವಿನಯ್ ರಾಜಕುಮಾರ್, ಗುರುಕುಮಾರ್, ಜನಚೇತನ ಟ್ರಸ್ಟ್ ನ ಅಧ್ಯಕ್ಷ ಪ್ರಸನ್ನ.ಎನ್.ಗೌಡ, ಮತ್ತಿತರರು ಭಾಗವಹಿಸಿದ್ದರು.

ಬೆಂಗಳೂರಿನ ರಾಜ್ಯ ಒಕ್ಕಲಿಗರ ಸಂಘ, ಡಾ.ರಾಜಕುಮಾರ್ ಸಿವಿಲ್ ಸರ್ವೀಸಸ್ ಅಕಾಡಮಿ, ಮೈಸೂರಿನ ಕುವೆಂಪುನಗರದ ಜನಚೇತನ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.

Leave a Reply

comments

Related Articles

error: