ಸುದ್ದಿ ಸಂಕ್ಷಿಪ್ತ

ಪದವಿ ಪರೀಕ್ಷಾ ಶುಲ್ಕ ಪಾವತಿಗೆ ಅವಧಿ ವಿಸ್ತರಣೆ

ಮೈಸೂರು,ಸೆ.18 : 2013-14ನೇ ಸಾಲಿನಲ್ಲಿ ಪ್ರವೇಶ ಪಡೆದಿರುವ ಪದವಿ ತರಗತಿಗಳಿಗೆ ವಿದ್ಯಾರ್ಥಿಗಳಿಗೆ ಅಕ್ಟೋಬರ್/ ನವೆಂಬರ್ 2017ನಲ್ಲಿ ಪರೀಕ್ಷಾ ಶುಲ್ಕವನ್ನು ಕಟ್ಟಲು ಸೆ.22ರವರೆಗೆ ಅವಧಿ ವಿಸ್ತರಿಸಲಾಗಿದೆ. ಸೆ.23ರೊಳಗೆ ಕಚೇರಿಗೆ ತಲುಪಿಸಬೇಕು.

ಈಗಾಗಲೇ 1,3,5 ಚಾರ್ತುಮಾಸದ ಪರೀಕ್ಷಾ ಶುಲ್ಕವನ್ನು ಪಾವತಿಸಿರುವವರು ಹೆಚ್ಚುವರಿಯಾಗಿ 2,4,6 ಚಾರ್ತುಮಾಸದ ಪರೀಕ್ಷೆಗಳಿಗೆ ಶುಲ್ಕವನ್ನು ಪಾವತಿಸಬಹುದು. ಅಂತರ್ಜಾಲದಲ್ಲಿ ಅರ್ಜಿ ನಮೂನೆ ಮುದ್ರಿಸಿಕೊಂಡು ಬ್ಯಾಂಕ್ ಚಲನ್ ನೊಂದಿಗೆ ಕಟ್ಟಿ ಸೆ.23ರೊಳಗೆ  ಕಾಲೇಜು ಕಚೇರಿಗೆ ತಲುಪಿಸಬೇಕೆಂದು ಪ್ರಾಂಶುಪಾಲರು ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: