ಮೈಸೂರು

ಹಸು ಕಳ್ಳನ ಬಂಧನ: ಒಂದು ಹಸು ವಶ

ಮೈಸೂರು, ಸೆ.೧೮: ರಾಜಾಜಿನಗರದಲ್ಲಿ ಹಸು ಕಳ್ಳತನ ಮಾಡಿದ್ದ ಆರೋಪಿಯನ್ನು ನಗರದ ಸರಸ್ವತಿಪುರಂ ಪೊಲೀಸರು ಬಂಧಿಸಿದ್ದಾರೆ.
ಶಿವರಾಜು (೩೨) ಬಂಧಿತ ಆರೋಪಿ. ಈತ ರಾಜಾಜಿನಗರದಲ್ಲಿ ಹಸುವನ್ನು ಕಳ್ಳತನ ಮಾಡಿದ್ದ. ಆನಂದ ನಗರದ ಶ್ರೀರಂಗ ಸಮುದಾಯ ಭವನದ ಬಳಿ ಹಸುವಿನೊಂದಿಗೆ ಅನುಮಾನಾಸ್ಪದವಾಗಿ ತೆರಳುತ್ತಿದ್ದ ವೇಳೆ ಅನುಮಾನಗೊಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಕಳ್ಳತನ ಮಾಡಿರುವ ವಿಷಯ ಬಾಯ್ಬಿಟ್ಟಿದ್ದಾನೆ. ಈತನಿಂದ ಸುಮಾರು ೪೦ ಸಾವಿರ ಮೌಲ್ಯದ ಒಂದು ಹಸುವನ್ನು ವಶಪಡಿಸಿಕೊಳ್ಳಲಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: