ಸುದ್ದಿ ಸಂಕ್ಷಿಪ್ತ

ಸ್ವಯಂ ಉದ್ಯೋಗಕ್ಕೆ ಧನ ಸಹಾಯ ಸೌಲಭ್ಯ

yourstory_empowering_womenಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದವತಿಯಿಂದ ಧನಶ್ರೀ ಯೋಜನೆಯಡಿ 18-60 ವಯೋಮಿತಿಯ ಎಚ್.ಐ.ವಿ. ಸೋಂಕಿತ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು 40 ಸಾವಿರ ರೂ.ಗಳನ್ನು ಶೇ.4 ರಷ್ಟು ಬಡ್ಡಿ ದರದಲ್ಲಿ ನೇರ ಸಾಲ ಹಾಗೂ 10ಸಾವಿರ ರೂ.ಗಳ ಸಹಾಯಧನ ನೀಡಲಾಗುವುದು. ಅರ್ಜಿ ಸಲ್ಲಿಸುವವರು ರಾಷ್ಟ್ರೀಕೃತ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು, ವಯೋಮಿತಿ 18 ರಿಂದ 60 ವರ್ಷದೊಳಗಿರಬೇಕು ಹಾಗೂ ಬಿಪಿಎಲ್ ಕುಟುಂಬದವರಾಗಿರಬೇಕು, ಎಚ್.ಐವಿ ಸೋಂಕಿತರೆಂದು ಆರೋಗ್ಯ ಕೇಂದ್ರದಲ್ಲಿ ಮತ್ತು ಐಸಿಟಿಸಿ ಕೇಂದ್ರದಲ್ಲಿ ಪಡೆದ ವೈದ್ಯಕೀಯ ವರದಿ ಹೊಂದಿರಬೇಕು.

ಅಭ್ಯರ್ಥಿಗಳು ಸ್ವಬರಹದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ 3 ಪ್ರತಿಯನ್ನು ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ನ.11ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದು.

Leave a Reply

comments

Related Articles

error: