ಮೈಸೂರು

ದಸರಾ ಮಹೋತ್ಸವ: ನಂದಿಧ್ವಜ ಪೂಜೆಗೆ ಸಮಯ ನಿಗದಿ

ಮೈಸೂರು,ಸೆ.19-ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ವಿಜಯದಶಮಿಯಂದು ಸಲ್ಲಿಸಲಾಗುವ ನಂದಿಧ್ವಜ ಪೂಜೆಗೆ ಸಮಯ ನಿಗದಿಯಾಗಿದೆ. ಸೆ.30 ರಂದು ಮಧ್ಯಾಹ್ನ 2.15ಕ್ಕೆ ಮಕರ ಲಗ್ನದಲ್ಲಿ ಕೋಟೆ ಆಂಜನೇಯಸ್ವಾಮಿ ದೇಗುಲದ ಎದುರು ನಂದಿಧ್ವಜ ಪೂಜೆ ನೆರವೇರಿಸಲಾಗುವುದು.

ನಂತರ ಸಂಜೆ 4.45ಕ್ಕೆ ಶುಭ ಮಕರಲಗ್ನದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡ ಅಧಿದೇವತೆ ಹೊತ್ತ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ಹಾಗೂ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅರ್ಜುನನಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. (ವರದಿ-ಆರ್.ವಿ, ಎಂ.ಎನ್)

 

 

Leave a Reply

comments

Related Articles

error: