ಮೈಸೂರು

ಸೆಪ್ಟೆಂಬರ್ 21 ರಂದು ದಸರಾ ರಂಗೋಲಿ ಸ್ಫರ್ಧೆ

ಮೈಸೂರು, ಸೆ.19 : ಮೈಸೂರು ದಸರಾ ಮಹೋತ್ಸವ2017ರ ಮಹಿಳಾ ದಸರಾ ಕಾರ್ಯಕ್ರಮದ ಪ್ರಯುಕ್ತ ಮಹಿಳೆಯರಿಗಾಗಿ ರಂಗೋಲಿ ಸ್ಫರ್ಧೆ ಸೆಪ್ಟೆಂಬರ್ 21 ರಂದು ಬೆಳಗ್ಗೆ 7.30 ರಿಂದ 9.30 ರವರೆಗೆ ಮೈಸೂರು ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಏರ್ಪಡಿಸಲಾಗಿದೆ.

18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗುವುದು. ಸ್ಪರ್ಧೆಗೆ ಒಂದು ಗಂಟೆಯ ಕಾಲಾವಕಾಶವನ್ನು ನೀಡಲಾಗುವುದು. ಸ್ಪರ್ಧೆಗೆ ರಂಗೋಲಿ ಹಾಗೂ ಬಣ್ಣವನ್ನು ಮಾತ್ರ ಉಪಯೋಗಿಸತಕ್ಕದ್ದು ಹಾಗೂ ಯಾವುದೇ ಪರಿಕರಗಳನ್ನು (ಉಪ್ಪು, ಹೂವು, ಧಾನ್ಯಗಳು ಇತ್ಯಾದಿ) ಬಳಸಬಾರದು, ಸ್ಪರ್ಧೆಗೆ 30 ನಿಮಿಷ ಮುಂಚಿತವಾಗಿ ಸ್ಪರ್ಧಾ ಸ್ಥಳದಲ್ಲಿ ಹಾಜರಾಗುವುದು. ಸ್ಪರ್ಧೆಗೆ ಭಾಗವಹಿಸಲು ಯಾವುದೇ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ಒಂದು ವೇಳೆ ಮೇಲೆ ತಿಳಿಸಿರುವ ಸ್ಥಳಗಳಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳದಿದ್ದಲ್ಲಿ, ಸ್ಪರ್ಧೆ ನಡೆಯುವ ದಿನಾಂಕದಂದು ಸ್ಥಳದಲ್ಲೇ ಹೆಸರು ನೊಂದಾಯಿಸಿಕೊಳ್ಳಬಹುದಾಗಿರುತ್ತದೆ. ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.

ಆಸಕ್ತ ಮಹಿಳೆಯರು ಸೆ.20 ರೊಳಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, 1ನೇ ಮಹಡಿ, ಸ್ತ್ರೀಶಕ್ತಿ ಭವನ, ವಿಜಯನಗರ 2ನೇ ಹಂತ, ಕೃಷ್ಣದೇವರಾಯ ವೃತ್ತ, ಮೈಸೂರು-17 ದೂರವಾಣಿ ಸಂಖ್ಯೆ 0821-2498031 / 2495432, ಶಿಶುಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ. ಮೈಸೂರು (ನಗರ)-0821-2491962, ಮೈಸೂರು (ಗ್ರಾಮಾಂತರ)-0821-2567940, ಪಿರಿಯಾಪಟ್ಟಣ-08223-274742, ತಿ.ನರಸೀಪುರ-08277-261267, ಹೆಚ್.ಡಿ.ಕೋಟೆ-08228-255320, ಹುಣಸೂರು-08222-252254, ಕೆ.ಆರ್.ನಗರ-08223-262714, ನಂಜನಗೂಡು-08221-226168 ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಉಪನಿರ್ದೇಶಕರು, ಮಹಿಳಾ ದಸರಾ ಉಪಸಮಿತಿ ಕಾರ್ಯಾಧ್ಯಕ್ಷರು ತಿಳಿಸಿದ್ದಾರೆ.

(ಎನ್.ಬಿ)

Leave a Reply

comments

Related Articles

error: