ಮೈಸೂರು

ಮಹಾಲಯ ಅಮಾವಾಸ್ಯೆ ಹಿನ್ನೆಲೆ : ಗಜಪಡೆ ತಾಲೀಮು ರದ್ದು

ಮೈಸೂರು,ಸೆ.19:- ವಿಶ್ವವಿಖ್ಯಾತ ಮೈಸೂರು ದಸರಾ 2017ರ ಪ್ರಯುಕ್ತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ತಾಲೀಮು ರದ್ದಾಗಿದೆ.

ಇಂದು ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಗಜಪಡೆಯ ತಾಲೀಮು ರದ್ದುಗೊಳಿಸಲಾಗಿದ್ದು, ತಾತ್ಕಾಲಿಕವಾಗಿ ದಸರಾ ಗಜಪಡೆಯ ಇಂದಿನ ತಾಲೀಮು ರದ್ದುಗೊಳಿಸಲಾಗಿದೆ. ಗಜಪಡೆಯ ತಾಲೀಮು ಅರಮನೆ ಆವರಣಕ್ಕೆ ಸೀಮಿತವಾಗಿದೆ. ನಿತ್ಯ ಮೆರವಣಿಗೆ ಸಾಗಲಿರುವ ಮಾರ್ಗದಲ್ಲಿ ಕರೆದೊಯ್ದು ತಾಲೀಮು ನಡೆಸಲಾಗುತ್ತಿತ್ತು. ಇಂದು ಮಹಾಲಯ ಅಮಾವಾಸ್ಯೆ ಇರುವುದರಿಂದ ನಿತ್ಯದ ತಾಲೀಮು ರದ್ದುಗೊಳಿಸಲಾಗಿದೆ. ಅಮಾವಾಸ್ಯೆಯ ದಿನದಂದು ಆನೆಗಳು ಅತಿರೇಕದಿಂದ ವರ್ತಿಸುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆಯಾಗಿ ತಾಲೀಮು ರದ್ದುಗೊಳಿಸಲಾಗಿದ್ದು, ತಾಲೀಮು ರದ್ದಾಗಿರುವುದರಿಂದ ಅರ್ಜುನ ನೇತೃತ್ವದ ದಸರಾ ಗಜಪಡೆ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿವೆ. (ಆರ್.ವಿ,ಎಸ್.ಎಚ್)

Leave a Reply

comments

Related Articles

error: