ಮೈಸೂರು

ಸೆ.20ರಂದು ಮೈಸೂರಿಗೆ ಎಂ.ವೀರಪ್ಪ ಮೊಯಿಲಿ

ಮೈಸೂರು, ಸೆ.19 : ಸಂಸದರು ಹಾಗೂ ಲೋಕಸಭೆಯ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಡಾ: ಎಂ. ವೀರಪ್ಪ ಮೊಯಿಲಿ ಅವರು ಸೆ. 20 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಸಂಜೆ 4 ಗಂಟೆಗೆ ಮೈಸೂರಿಗೆ ಆಗಮಿಸುವರು. ಸಂಜೆ 5 ಗಂಟೆಗೆ ಸರಸ್ವತಿಪುರಂ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಡಾ: ಕೆ.ಎಸ್. ನಿಸಾರ್ ಅಹಮದ್ ರವರ “ಸೀಮಾತೀತನ ಸಿರಿವಂತ ಸುಗ್ಗಿ” ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ರಾತ್ರಿ 7-30 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.

(ಎನ್.ಬಿ)

Leave a Reply

comments

Related Articles

error: