ಪ್ರಮುಖ ಸುದ್ದಿಮೈಸೂರು

ಅರಮನೆಗೆ ಭಾರತೀಯ ವಾಯುದಳ ಅಧಿಕಾರಿಗಳ ಭೇಟಿ

ಮೈಸೂರು,ಸೆ.19:- ದಸರಾ ಮಹೋತ್ಸವ ಸಮಿತಿ 2017ನೇ ನಾಡಹಬ್ಬವನ್ನು  ವೈಭವದಿಂದ ಹಾಗೂ ಗಣರಾಜ್ಯೊತ್ಸವ ದಿನದ ಪರೇಡ್ ಮಾದರಿಯಲ್ಲಿ ಆಯೋಜಿಸುತ್ತಿದ್ದು ರಕ್ಷಣಾ ದಳಗಳನ್ನು ಮೆರವಣಿಗೆಯಲ್ಲಿ ಕರೆತರಲು ಪ್ರಯತ್ನಗಳು ಮುಂದುವರಿದಿದೆ.

ಮಂಗಳವಾರ ಮೈಸೂರಿನಲ್ಲಿರುವ ವಾಯುದಳದ ಆಧಿಕಾರಿಗಳು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ. ರಂದೀಪ್ ಅವರ ನೇತೃತ್ವದಲ್ಲಿ ಅರಮನೆ ಆವರಣದಲ್ಲಿ ಪರಿಶೀಲನೆ ಮತ್ತು ಮಾಹಿತಿ ವಿನಿಮಯ ಮಾಡಿಕೊಂಡರು. ವಾಯುದಳದ ಬ್ಯಾಂಡ್ ತಂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳವ ವಿಚಾರವನ್ನು ಮುಂದಿನ ದಿನಗಳಲ್ಲಿ‌ ಅಧಿಕೃತವಾಗಿ  ತಿಳಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಅರಮನೆ ಆಡಳಿತ ಮಂಡಳಿ ಉಪನಿರ್ದೆಶಕ ಟಿ. ಎಸ್. ಸುಬ್ರಹ್ಮಣ್ಯ , ಎಸಿಪಿ ಶೈಲೇಂದ್ರ ಹಾಗೂ ಇತರ ಪೋಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: