ಮೈಸೂರು

ಗ್ಯಾಸ್ ಸಿಲಿಂಡರ್ ಸ್ಪೋಟ : ಐವರಿಗೆ ಗಾಯ

gass-2ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚಾಮಲಾಪುರದಲ್ಲಿನ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿದ್ದ ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ  ಶನಿವಾರ ರಾತ್ರಿ ನಡೆದಿದೆ.

ಸಿಲಿಂಡರ್ ಸ್ಪೋಟದಿಂದ ಗಾಯಗೊಂಡವರನ್ನು ಮಣಿ(32), ಮುರುಗೇಶ್(54), ತುಳಸಿ(40), ಗೌರಮ್ಮ(27), ಬಸವರಾಜು(45) ಎಂದು ಗುರುತಿಸಲಾಗಿದೆ.

ಚಾಮಲಾಪುರದ ಮುರುಗೇಶ್ ಎಂಬವರ ಮನೆಯಲ್ಲಿ ರಾತ್ರಿ ಎಲ್ಲರೂ ಊಟ ಮುಗಿಸಿ ಗ್ಯಾಸ್ ಸಿಲಿಂಡರ್ ನ ರೆಗ್ಯುಲೇಟರ್ ಆಫ್ ಮಾಡಿ ಮಲಗಲು ತೆರಳಿದ್ದರು. ಆದರೆ ಗ್ಯಾಸ್ ಸೋರಿಕೆಯಾಗುತ್ತಿರುವುದು ಅವರ ಅರಿವಿಗೆ ಬಂದಿರಲಿಲ್ಲ ಎನ್ನಲಾಗಿದೆ. ಸ್ವಲ್ಪ ಸಮಯದ ಬಳಿಕ ವಿದ್ಯುತ್ ಸ್ವಿಚ್ ಹಾಕಿದಾಗ ಇದ್ದಕ್ಕಿದ್ದಂತೆ ಸಿಲಿಂಡರ್ ಸ್ಪೋಟಗೊಂಡಿದ್ದು ಐವರಿಗೂ ತೀವ್ರತೆರನಾದ ಗಾಯಗಳಾಗಿವೆ. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಪೋಟದ ತೀವ್ರತೆಗೆ ಮನೆಯಲ್ಲಿರುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: