ಮೈಸೂರು

ನವರಾತ್ರಿ : ಗಾಯತ್ರಿದೇವಿಗೆ ವಿಶೇಷ ಪೂಜೆ ಅಲಂಕಾರ – ಸಾಂಸ್ಕೃತಿಕ ಕಾರ್ಯಕ್ರಮ ಸೆ.21ರಿಂದ

ಮೈಸೂರು,ಸೆ.19 : ವಿವೇಕಾನಂದನಗರ ಬ್ರಾಹ್ಮಣ ಮಹಾಸಭಾ ವತಿಯಿಂದ ಶರನ್ನವರಾತ್ರಿ ಪ್ರಯುಕ್ತ ಸೆ.21 ರಿಂದ 29ರವರೆಗೆ ಶ್ರೀರಾಂಪುರ ಎರಡನೆ ಹಂತದ ಶ್ರೀಲಕ್ಷ್ಮಿನೃಸಿಂಹ ಸ್ವಾಮಿ, ಮಹಾಗಣಪತಿ ಹಾಗೂ ಶ್ರೀಗಾಯತ್ರಿದೇವಿ ದೇವಸ್ಥಾನದಲ್ಲಿ ಪ್ರತಿದಿನ ವಿಶೇಷ ಪೂಜೆ, ಲಕ್ಷ್ಮೀನೃಸಿಂಹ ಸಹಸ್ರನಾಮ, ಪುಷ್ಪಾಲಂಕಾರ ಹಾಗೂ ಸಂಜೆ 6.30 ರಿಂದ ಸಂಗೀತೋತ್ಸವ ನಡೆಯುವುದು.

ಸೆ.21ರಂದು ವಿದ್ವಾನ್ ಹರೀಶ್ ಪಾಂಡವ ಮತ್ತು ವೃಂದದಿಂದ ಸ್ಯಾಕ್ಸೋಫೋನ್ ವಾದನ, ಸೆ.22ರಂದು ವಿದ್ವಾನ್ ಎಚ್.ಕೆ.ನರಸಿಂಹಮೂರ್ತಿ ಮತ್ತು ವೃಂದದಿಂದ ಪಿಟೀಲುವಾದನ, ಸೆ.23ರಂದು ವಿದ್ವಾನ್ ಬಿ.ಎನ್.ಎಸ್. ಮುರಳಿಯವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸೆ.24ರಂದು ವಿದ್ವಾನ್ ವಂಶೀಧರ್ ಅವರಿಂದ ಕೊಳಲು ವಾದನ, ಸೆ.25ಕ್ಕೆ ವಿದ್ವಾನ್ ಎನ್.ಆರ್.ಪ್ರಶಾಂತ್ ಮತ್ತು ವೃಂದದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸೆ.26ರಂದು ವಿದುಷಿ ಎಲ್.ಅರ್ಚನಾ ಮತ್ತು ವೃಂದದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸೆ.27ರಂದು ವಿದುಷಿ ಎನ್.ಭಾರತೀ ಮತ್ತು ವೃಂದದಿಂದ ವೀಣಾ ವಾದನ, ಸೆ.28ರಂದು ವಿದುಷಿ ಡಾ.ಆರ್.ಎನ್.ಶ್ರೀಲತಾ ಮತ್ತು ವೃಂದದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಸೆ.29ರಂದು ಕೃ.ರಾಮಚಂದ್ರ, ವಿದುಷಿ ಧರಿತ್ರಿ ಆನಂದರಾವ್ ಮತ್ತು ವೃಂದದಿಂದ ದೇವಿ ಮಹಾತ್ಮೆ ಗೀತ ರೂಪಕ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: