ಮೈಸೂರು

ತ್ರಿಪುರ ಸುಂದರಿ ದೇವಿಗೆ ನೋಟಿನ ಅಲಂಕಾರ

ಮೈಸೂರಿನಲ್ಲಿ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಲ್ಲಿನ ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಾಲಯದಲ್ಲಿ ಬಾಲತ್ರಿಪುರ ಸುಂದರಿ ಅಮ್ಮನ ವಿಗ್ರಹಕ್ಕೆ ನೋಟಿನ ಅಲಂಕಾರ ಮಾಡಲಾಗಿದೆ. ನೋಟಿನ ಅಲಂಕಾರದಲ್ಲಿ ತಾಯಿ ತ್ರಿಪುರ ಸುಂದರಿ ಮಹಾಲಕ್ಷ್ಮೀ ಅವತಾರದಲ್ಲಿ ಭೂವಿಗಿಳಿದಂತೆ ಭಾಸವಾಗುತ್ತಿದೆ.

ದೇವಳದ ಸಿಬ್ಬಂದಿಗಳು ದೇವಾಲಯವನ್ನು ನೋಟುಗಳಿಂದಲೇ ವಿಶೇಷವಾಗಿ ಅಲಂಕರಿಸಿದ್ದು, ದೇವಿಯ ನೋಟಿನ ಅಲಂಕಾರಕ್ಕಾಗಿ 10, 20, 50, 100, 500 ಸೇರಿದಂತೆ 1000ರೂ.ಗಳ ನೋಟುಗಳನ್ನು ಬಳಕೆ ಮಾಡಿದ್ದಾರೆ. ಒಟ್ಟು ಹತ್ತು ಲಕ್ಷ ರೂಪಾಯಿಗಳನ್ನು ಅಲಂಕಾರಕ್ಕಾಗಿ ಬಳಸಿಕೊಳ್ಳಲಾಗಿದೆ.

ದೇವಿಯ ವಿಶೇಷ ಅಲಂಕಾರವನ್ನು ನೋಡಲು ಭಕ್ತರು ದೇವಾಲಯಕ್ಕೆ ಮುಗಿಬಿದ್ದಿದ್ದು, ಪೂಜೆ ಸಲ್ಲಿಸುತ್ತಿದ್ದಾರೆ. ಭಾನುವಾರ ಸಂಜೆಯವರೆಗೂ ಅಲಂಕಾರ ವೀಕ್ಷಣೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಸಂಜೆ ಮಹಾಲಕ್ಷ್ಮೀ ಪೂಜೆಯೊಂದಿಗೆ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಲಿದೆ.

Leave a Reply

comments

Related Articles

error: