ಮೈಸೂರು

ದಂತ ಶಿಬಿರ

ಎನ್ ಪಿ ಎಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಇತ್ತೀಚೆಗೆ ದಂತ ಶಿಬಿರ ಕಾರ್ಯಕ್ರಮ ನಡೆಯಿತು.  ದಂತ ಜಾಗೃತಿ ಬಗ್ಗೆ ಚರ್ಚೆ, ವಿಶೇಷವಾಗಿ ದಂತಕ್ಷಯವನ್ನು ತಡೆಯುವ  ಕ್ರಮಗಳ ಕುರಿತು ಉಪನ್ಯಾಸ ನೀಡಲಾಯಿತು.  ದಂತ ವೈದ್ಯರು ಹುಳುಕು ಹಲ್ಲಿನ ಕುರಿತು ಮಾತನಾಡಿದರು. ಸಾಮಾನ್ಯವಾಗಿ ತಂಪು ಪಾನೀಯಗಳು, ಮಿಠಾಯಿಗಳು,  ಬಿಸ್ಕತ್ತುಗಳಲ್ಲಿ   ಸಕ್ಕರೆ ಅಂಶವನ್ನು ಸೇರಿಸಲಾಗಿರುತ್ತದೆ.  ಇವು ವಾಸ್ತವವಾಗಿ ವಸಡು ಮತ್ತು ಹಲ್ಲುಗಳಿಗೆ ಹಾನಿ ಉಂಟುಮಾಡಬಹುದು. ಆದ್ದರಿಂದ ನಾವು ಬಳಸುವ ಸಕ್ಕರೆ ಮತ್ತು ಸಕ್ಕರೆ ಪದಾರ್ಥಗಳನ್ನು ಪರೀಕ್ಷಿಸಬೇಕು ಎಂದರು. ದಂತವೈದ್ಯ ವಿಕ್ರಮ್ ಪ್ರತ್ಯೇಕವಾಗಿ ಪ್ರತಿ ವಿದ್ಯಾರ್ಥಿಯನ್ನು ಪರಿಶೀಲಿಸಿದರಲ್ಲದೇ  ಹಲ್ಲುಗಳ ಆರೈಕೆಗೆ ಸಂಬಂಧಿಸಿದಂತೆ  ಸಲಹೆ ನೀಡಿದರು.

Leave a Reply

comments

Related Articles

error: