ಮೈಸೂರು

ತಿಪ್ಪಯ್ಯನ ಕೆರೆ ಪುನಶ್ಚೇತನ ಹಾಗೂ ಮೈಸೂರನ್ನು ನೀರಿನಿಂದ ಧನಾತ್ಮಕ ಮಾಡುವ ಯೋಜನೆಗೆ ಚಾಲನೆ

ಮೈಸೂರು,ಸೆ.20:- ಆಟೋಮೇಟಿವ್ ಆಕ್ಸಲ್ಸ್ ನಿಯಮಿತ ವತಿಯಿಂದ ತಿಪ್ಪಯ್ಯನ ಕೆರೆ ಪುನಶ್ಚೇತನ ಹಾಗೂ ಮೈಸೂರನ್ನು ನೀರಿನಿಂದ ಧನಾತ್ಮಕ ಮಾಡುವ ಯೋಜನೆಗೆ ಚಾಲನೆ ನೀಡಲಾಯಿತು.

ಬುಧವಾರ ಅಭಿವೃದ್ಧೀ ಕಾರ್ಯಗಳ  ಶಿಲಾನ್ಯಾಸ ನೆರವೇರಿಸಲಾಯಿತು. ನಗರದ ಕೆರೆಗಳನ್ನು ಉಳಿಸುವ ಸಲುವಾಗಿ ಕರ್ನಾಟಕ ಸರ್ಕಾರ ಮತ್ತು ಖಾಸಗೀ ಸಂಸ್ಥೆಗಳು ಹಾಗೂ ಸ್ಥಳೀಯ ನಿವಾಸಿಗಳ ಸಹ ಭಾಗಿತ್ವದಲ್ಲಿ ನಗರದ ತಿಪ್ಪಯನ ಕೆರೆಯನ್ನು ಪುನಶ್ಚೇತನಗೊಳಿಸಿ ಒಂದು ಸುಂದರ ರೂಪಕ್ಕೆ ತರಲಾಗುತ್ತಿತ್ತು. ಈ ಹಿಂದೆ ಇದ್ದ ಕೆರೆಯ ರೂಪವೇ ಬೇಕಾಗಿದ್ದು ಆ ಕೆರೆಯನ್ನು ಪುನಶ್ಚೇತನಗೊಳಿಸಲು ಆಟೋಮೋಟಿವ್ ಆಕ್ಸಲ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ 25 ಲಕ್ಷ ರೂ. ಗಳ ಬಜೆಟ್ ನಲ್ಲಿ   ಅಭಿವೃದ್ಧಿ ಮಾಡಲು ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್ , ಜೋಸೆಫ್, ಮೆರಿಟಲ್ ಇಂಕ್ ಸಂಸ್ಥೆಯ ಸಿಇಒ ಮತ್ತು ಅಧ್ಯಕ್ಷರಾದ ಕ್ರೇಗ್, ಮುತುಕುಮಾರ್ ಮತ್ತಿತರರು  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: