ದೇಶವಿದೇಶ

ಎಚ್-1ಬಿ ವೀಸಾ ನಿರ್ಬಂಧ ತೆರವುಗೊಳಿಸಿದ ಅಮೆರಿಕ : ಭಾರತೀಯ ಟೆಕ್ಕಿಗಳಿಗೆ ಮತ್ತೆ ಮೂಡಿದ ರೆಕ್ಕೆ

ವಾಷಿಂಗ್ಟನ್, ಸೆ.20 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ಟ್ರಂಪ್ ಅವರು ಅಧಿಕಾರಕ್ಕೆ ಬಂದ ಹೊಸತರಲ್ಲಿ ತಮ್ಮ ಚುನಾವನಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಎಚ್‍-1ಬಿ ವೀಸಾ ನೀಡುವಿಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಕ್ಕೆ ಒಳಪಡಿಸಿದ್ದರು.

ಆದರೆ ಇದೀಗ ನಿರ್ಬಂಧವನ್ನು ಸಡಿಲಗೊಳಿಸುವ ಸಂಬಂಧ ಟ್ರಂಪ್ ಸರ್ಕಾರ ಕಾರ್ಯೋನ್ಮುಖವಾಗಿದ್ದು ಎಚ್‍-1ಬಿ ವೀಸಾ ಪಡೆಯಲು ಇದ್ದ ನಿಯಮಗಳನ್ನು ಸಡಿಲಗೊಳಿಸಿದೆ.

ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ-ಯುಎಸ್‍ಸಿಐಎಸ್ 2018ನೇ ಸಾಲಿಗೆ ಸಂಬಂಧಿಸಿದಂತೆ ಇರುವ ವೀಸಾಗಳನ್ನು ಪರಿಷ್ಕರಿಸಿ ನೀಡಲಾಗುತ್ತಿದೆ. ಇದರಿಂದ ಮತ್ತೆ ಅಮೆರಿಕಕ್ಕೆ ತೆರಳಿ ಕೆಲಸ ಮಾಡುವ ಅವಕಾಶ ಭಾರತದ ತಂತ್ರಜ್ಞರಿಗೆ ಸಿಕ್ಕಿದೆ. ಈಗಾಗಲೇ ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪಡೆದಿರುವ 20 ಸಾವಿರ ಹೆಚ್ಚುವರಿ ಅರ್ಜಿಗಳನ್ನು ಪರಿಷ್ಕರಿಸುವ ಕಾರ್ಯಗಳೂ ಆರಂಭವಾಗಿವೆ. ಮುಂದಿನ ವರ್ಷಕ್ಕೆ ಅನುಕೂಲವಾಗುವಂತೆ ಒಟ್ಟು 65 ಸಾವಿರ ಅರ್ಜಿಗಳನ್ನು ಪರಿಷ್ಕರಿಸಲು ಅಲ್ಲಿನ ವಲಸೆ ಇಲಾಖೆ ಮುಂದಾಗಿದೆ.

(ಎನ್.ಬಿ)

Leave a Reply

comments

Related Articles

error: