
ಮೈಸೂರು
ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ವಿವಿಧ ಅಭಿಷೇಕ
ಮೈಸೂರು, ಸೆ.20:- ಮೈಸೂರು ದಸರಾ ಉತ್ಸವದಲ್ಲಿನ ಅಂಬಾರಿಯಲ್ಲಿ ಕುಳಿತು ವಿಜೃಂಭಿಸಲಿರುವ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ವಿವಿಧ ಅಭಿಷೇಕ ನಡೆಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ತಾಯಿ ಚಾಮುಂಡಿ ದೇವಳದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಬುಧವಾರ ತಾಯಿಗೆ ಅಭಿಷೇಕ ನೆರವೇರಿಸಿ, ಸೀರೆ ಉಡಿಸಿ ಅಲಂಕರಿಸಿದರು. ಗುರುವಾರ ಬೆಳಿಗ್ಗೆ ತಾಯಿಗೆ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ದಸರಾ ಮಹೋತ್ಸವಕ್ಕೆ ಚಾಲನೆ ದೊರಕಲಿದೆ. ವಿಜಯದಶಮಿಯ ದಿನ ಚಾಮುಂಡಿ ಬೆಟ್ಟದಿಂದ ಅರಮನೆಗೆ ತಂದು ಅಂಬಾರಿಯಲ್ಲಿ ಕುಳ್ಳಿರಿಸಲಾಗುವುದು. (ಕೆ.ಎಸ್,ಎಸ್.ಎಚ್)