ಮೈಸೂರು

ರಸ್ತೆ ಅಪಘಾತದಲ್ಲಿ ನಾಯಿ ಸಾವು

ಅಮಾನವೀಯ ವರ್ತನೆಗಳೇ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಕೆಲವೆಡೆ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ವ್ಯಕ್ತಿಯೊಬ್ಬರು ಸಾಬೀತುಪಡಿಸಿದ್ದಾರೆ.

ನಡೆದಿದಿಷ್ಟು: ಮೈಸೂರಿನ ಶಾಂತಲಾ ಚಿತ್ರಮಂದಿರದ ಜಂಕ್ಷನ್ ಬಳಿ ಅಪರಿಚಿತ ವಾಹನವೊಂದು ರಸ್ತೆಯಲ್ಲಿ ಸಾಗುತ್ತಿದ್ದ ನಾಯಿಯನ್ನು ಬಲಿ ತೆಗೆದುಕೊಂಡಿತ್ತು. ಈ ಘಟನೆಯನ್ನು ನೋಡಿದ ವ್ಯಕ್ತಿಯೊಬ್ಬರು ನಾಯಿಯನ್ನು ಬದಿಯಲ್ಲಿ ಎತ್ತಿ ಹಾಕಿ ಅದಕ್ಕೆ ಹಾರ ಅರ್ಪಿಸಿ, ಗಂಧದ ಕಡ್ಡಿ ಬೆಳಗಿಸುವ ಮೂಲಕ ಉದಾರತೆ ಮೆರೆದಿದ್ದಾರೆ. ಈ ಕುರಿತು ಅವರನ್ನು ನಮ್ಮ ಪ್ರತಿನಿಧಿ ಕೇಳಿದಾಗ ನನಗೆ ಪ್ರಚಾರ ಬೇಡ. ಇದೊಂದು ಪುಣ್ಯದ ಕೆಲಸ ಎಂದು ತಿಳಿಸಿದರು. ಒಟ್ಟಿನಲ್ಲಿ ಯಾರಿಗೂ ಏನಾಯಿತು ಎಂದು ನೋಡಲು ಸಮಯವಿಲ್ಲ. ತಮ್ಮ ವಾಹನದಿಂದ ಗುದ್ದಿ ಮುಂದೆ ಓಡಿಸುವವರೇ ಜಾಸ್ತಿ ಇರುವ ಇಂದಿನ ದಿನದಲ್ಲಿ ಅಲ್ಪಸ್ವಲ್ಪವಾದರೂ ಮಾನವೀಯತೆ ಅಲ್ಲಲ್ಲಿ ಕಾಣ ಸಿಗುವುದು ಅಪರೂಪವೇ ಸರಿ.

Leave a Reply

comments

Related Articles

error: