ಮೈಸೂರು

ಹಸಿರು ದಳದಿಂದ ಸ್ವಚ್ಛತಾ ಅಭಿಯಾನ

ಮೈಸೂರಿನ ಕುವೆಂಪುನಗರದದಲ್ಲಿ ಹಸಿರು ದಳ ಮತ್ತು ಮೈಸೂರು ಗ್ರಾಹಕರ ಪರಿಷತ್ ವತಿಯಿಂದ ಇತ್ತೀಚೆಗೆ ಸ್ವಚ್ಛತಾ ಆಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಕುವೆಂಪುನಗರದಲ್ಲಿ ಹಮ್ಮಿಕೊಳ್ಳಲಾದ ಸ್ವಚ್ಛತಾ ಅಭಿಯಾನದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಹಸಿರು ಸಮವಸ್ತ್ರ ಧರಿಸಿದ ಯುವಕರ ತಂಡವು ಮಳಿಗೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳನ್ನು ಹಾಗೂ ಕಾರ್ಡ್ ಬೋರ್ಡ್ ಬಾಕ್ಸ ಗಳನ್ನು, ಥರ್ಮಾಕೋಲ್, ಪೇಪರ್ ಕಪ್ ಗಳನ್ನು ಸಂಗ್ರಹಿಸುತ್ತಿದೆ.

ಹಸಿರುದಳ ಸಂಯೋಜಕ ಆನಂದ ಮಾತನಾಡಿ ಕುವೆಂಪು ನಗರದಲ್ಲಿ ನಾವು ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಅವುಗಳ ಮರುಬಳಕೆಯ ಕುರಿತು ಪ್ರಾಯೋಗಿಕವಾಗಿ ಪ್ರಯತ್ನಿಸುತ್ತಿದ್ದೇವೆ. ಇಲ್ಲಿನ ಜನತೆಯೂ ಸಹಕರಿಸುತ್ತಾರೆನ್ನುವ ವಿಶ್ವಾಸವಿದೆ. ಇದರಲ್ಲಿ ಹೆಚ್ಚು ನಿರುದ್ಯೋಗಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.7090869394, 8123909638ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: