ಕರ್ನಾಟಕಮೈಸೂರು

ನಿಯಮ ಬಾಹಿರ ನೇಮಕಾತಿ ತಡೆಯುವಂತೆ ಸಚಿವ ರಾಯರೆಡ್ಡಿಗೆ ಯುವರಾಜ ಕಾಲೇಜು ಅತಿಥಿ ಉಪನ್ಯಾಸಕರ ವೃಂದ ಮನವಿ

ಮೈಸೂರು ವಿವಿಯ ಯುವರಾಜ ಕಾಲೇಜಿನ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಕಾಲೇಜಿನ ಅತಿಥಿ ಉಪನ್ಯಾಸಕರ ವೃಂದ ಮನವಿ ಸಲ್ಲಿಸಿದೆ.

ಹಿಂದಿನ ಪ್ರಾಂಶುಪಾಲ ಪ್ರೊ. ಎಚ್. ನಂಜೇಗೌಡ ಅವರು ನಿವೃತ್ತರಾಗುವ ಕೆಲವೆ ಗಂಟೆಗಳಿಗೂ ಮುನ್ನ ಇಂತಹ ಅಮಾನವೀಯ ನಿರ್ಧಾರ ಕೈಗೊಂಡಿದ್ದಾರೆ. ಜೊತೆಗೆ ಬಹಳ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮ್ಮನ್ನು ವಜಾಗೊಳಿಸಿ ಇತ್ತೀಚಿಗೆ ನೇಮಿಸಿಕೊಂಡು ಸೇವೆಯಿಂದ ಬಿಡುಗಡೆಗೊಳಿಸಿರುವವರನ್ನು ಮತ್ತೆ ನೇಮಿಸಿಕೊಳ್ಳಲು ತಯಾರಿ ನಡೆಯುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ ಎಂದು ಅತಿಥಿ ಉಪನ್ಯಾಸಕರ ವೃಂದ ಆರೋಪಿಸಿದೆ.

“18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 160 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸಿರುವುದು ಕಾನೂನು ಬಾಹಿರ. ಈ ಪ್ರಕರಣದಲ್ಲಿ ರಾಜ್ಯದ ಹೈಕೋರ್ಟ್‍ ಕೂಡ ಸ್ಪಷ್ಟ ನಿರ್ದೇಶನ ನೀಡಿದೆ. ಹೀಗಿರುವಾಗ ಏಕಾಏಕಿ ಅತಿಥಿ ಉಪನ್ಯಾಸಕರನ್ನು ವಜಾಗೊಳಿಸಿರುವುದು ಹೈಕೋರ್ಟ್‍ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ” ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಅತಿಥಿ ಉಪನ್ಯಾಸಕರು ತಿಳಿಸಿದ್ದಾರೆ.

Leave a Reply

comments

Related Articles

error: