ಕರ್ನಾಟಕ

ಗುಣ ಮಟ್ಟದ ಹಾಲು ಪೂರೈಕೆ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಿ : ಕೆ. ಮಂಜುಳ

ರಾಜ್ಯ(ಚಾಮರಾಜನಗರ)ಸೆ.20:- ರೈತರು ಡೈರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಂತೆ ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಕೆ.ಮಂಜುಳ ತಿಳಿಸಿದರು.

ಅವರು ಯಳಂದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ದುಗ್ಗಹಟ್ಟಿ-ಮೆಳ್ಳಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2016-17 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ದುಗ್ಗಹಟ್ಟಿ ಮೆಳ್ಳಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು ಅಭಿವೃದ್ದಿಯಲ್ಲಿ ನಡೆಯುತ್ತಿರುವುದು ಸಂತಸದಾಯಕ. ಅಲ್ಲದೇ ಮೈಸೂರು-ಚಾಮರಾಜನಗರ ಹಾಲು ಒಕ್ಕೂಟವು ಲೀಟರ್ ಹಾಲಿಗೆ 25 ರೂ.ಗಳನ್ನು ನೀಡುತ್ತಿದ್ದು ಬೇರೆ ಯಾವುದೇ ಒಕ್ಕೂಟವು ನೀಡುತ್ತಿಲ್ಲ. ಆದ್ದರಿಂದ ರೈತರು ಉತ್ತಮ ಗುಣಮಟ್ಟದ ಹಾಲನ್ನು ಡೈರಿಗೆ ಪೂರೈಕೆ ಮಾಡಬೇಕು. ಜೊತೆಗೆ ರೈತರು ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿ ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕು. ಜೊತೆಗೆ ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಸದಸ್ಯರುಗಳ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿವೇತನ ನೀಡುವ ಸೌಲಭ್ಯವಿದೆ. ಜೊತೆಗೆ ಹೆಣ್ಣು ಕರುಗಳ ಸಂಭಾವನೆ ಮಾಡುವ ನಿಟ್ಟಿನಲ್ಲಿ ಒಕ್ಕೂಟದ ವತಿಯಿಂದ ಹಣವನ್ನು ನೀಡುತ್ತಿದ್ದು ಇದರ ಸದುಪಯೋಗಪಡೆದುಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಸುಧಾಮಣಿ, ಉಪಾಧ್ಯಕ್ಷೆ ಸಾಕಮ್ಮ, ಜಿಲ್ಲಾ ಹಾಲು ಒಕ್ಕೂಟದ ಸಮಾಲೋಚಕ ಬಿ.ಎನ್.ಉದಯಕುಮಾರ್, ಸಂಘದ ನಿರ್ದೇಶಕರಾದ ಅನ್ನಪೂರ್ಣ, ಸುಧಾ, ನಾಗರತ್ನಮ್ಮ, ಪುಷ್ಪಲತಾ, ಕೆಂಪಮ್ಮ, ಲಕ್ಷ್ಮಮ್ಮ, ಪಾರ್ವತಮ್ಮ, ಅಂಜಲಿ, ರಾಜಮ್ಮ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಪ್ರಮೀಳಾ, ಹಾಲು ಪರೀಕ್ಷಕಿ ಅಂಬಿಕ, ಸಹಾಯಕಿ ಗೌರಮ್ಮ, ನಂಜಮಣಿ, ಪ್ರಮೋದ್ ಸೇರಿದಂತೆ ಇತರರು ಇದ್ದರು. (ಜಿ.ಎನ್,ಎಸ್.ಎಚ್)

Leave a Reply

comments

Related Articles

error: