ಸುದ್ದಿ ಸಂಕ್ಷಿಪ್ತ
ತಾಲ್ಲೂಕು ಮಟ್ಟದ ಕ್ರೀಡಾಕೂಟ ಮುಂದೂಡಿಕೆ
ಮಡಿಕೇರಿ,ಸೆ.20-ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಾಪೋಕ್ಲುನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಮಡಿಕೇರಿ ತಾಲ್ಲೂಕು ಮಟ್ಟದ ಕ್ರೀಡಾಕೂಟ ಸೆ.21 ರಿಂದ 23 ರವರೆಗೆ ನಡೆಯಬೇಕಾಗಿದ್ದು, ಆದರೆ ದಸರಾ ಹಬ್ಬದ ಪ್ರಯುಕ್ತ ಮದ್ಯಂತರ ರಜೆಯನ್ನು ಸೆ.21 ರಿಂದ ಅ.5 ರವರೆಗೆ ಘೋಷಿಸಿರುವುದರಿಂದ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಮುಂದೂಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ತಿಳಿಸಿದ್ದಾರೆ. (ವರದಿ-ಕೆಸಿಐ, ಎಂ.ಎನ್)