ಮೈಸೂರು

ಸೆ.24 ರಿಂದ ಅ.2ರವರೆಗೆ ನಟನ ರಂಗಶಾಲೆಯ ನಾಟಕೋತ್ಸವ

ಮೈಸೂರು,ಸೆ.20 : ನಟನ ರಂಗಶಾಲೆಯಿಂದ ಸೆ.24 ರಿಂದ ಅಕ್ಟೋಬರ್ 2ರವರೆಗೆ ನಾಟಕೋತ್ಸವ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಪ್ರತಿ ದಿನ ಸಂಜೆ 6.30ರಿಂದ ವಿಭಿನ್ನ ಎಂಟು ನಾಟಕಗಳು ಪ್ರದರ್ಶನಗೊಳ್ಳಲಿವೆ.

ಸೆ.24ರ ಉದ್ಘಾಟನೆಯ ದಿನದಂದು ‘ಚೋರ ಚರಣದಾಸ’ ನಾಟಕ ಪ್ರದರ್ಶನಗೊಳ್ಳುವುದು, ಸೆ.25ರಂದು ಗುರುದೇವ ರವೀಂದ್ರನಾಥ ಟ್ಯಾಗೋರರ ‘ರಕ್ತ ಕರಬಿ’, ಸೆ.26ರಂದು ವಿವೇಕ ಶಾನಭಾಗರ ‘ಬಹುಮುಖಿ’. ಸೆ.27 ಮತ್ತು 28ರ ವಾರಾಂತ್ಯದಲ್ಲಿ ಭಾವೈಕ್ಯತೆ ಸಾರುವ ರಂಗಾಯಣದ ರಾಮನಾಥ್ ಅವರ ‘ರಾಮ ರಹೀಮ’ ನಾಟಕ. ಸೆ.29ರಂದು ಶೇಕ್ಸ್ ಪಿಯರ್ ‘ದಿ ಟೆಂಪೆಸ್ಟ್’ ಆಧಾರಿತ ‘ಧಾಂ ಧೂಂ ಸುಂಟರಗಾಳಿ, ಸೆ.30ರಂದು ವರಕವಿ ದ.ರಾ.ಬೇಂದ್ರೆಯವರ ‘ಸಾಯೋ ಆಟ’ ಅ.1ರಂದು ಸಂಸಾರದಲ್ಲಿ ಸನಿದಪ ಹಾಗೂ ಅ.2ರಂದು ತೋರಣಗಲ್ ರಾಜಾರಾಯರ ‘ಸುಭದ್ರಾ ಕಲ್ಯಾಣ’ ನಾಟಕಗಳು ಪ್ರದರ್ಶನಗೊಳ್ಳಲಿವೆ.

ವಿಭಿನ್ನ ಮತ್ತು ವಿಶಿಷ್ಟ ಶೈಲಿ, ವಸ್ತು, ಅಭಿವ್ಯಕ್ತಿ, ನಟನೆ ಎಂಟು ಪ್ರಖ್ಯಾತ ನಾಟಕಗಳು ಪ್ರದರ್ಶನಗೊಳ್ಳಲಿದ್ದು, ಈ ಎಂಟೂ ನಾಟಕಗಳನ್ನು ನಟನ ರಂಗಶಾಲೆಯ ಕಲಾವಿದರೇ ಅಭಿನಯಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: