ಸುದ್ದಿ ಸಂಕ್ಷಿಪ್ತ
ಇಂದಿನಿಂದ ಶಾಲಾ-ಕಾಲೇಜುಗಳಿಗೆ ರಜೆ
ಮಡಿಕೇರಿ,ಸೆ.20-ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ವಿಜಯದಶಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದರಿಂದ 2017 ನೇ ಸಾಲಿನ ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ಶಾಲೆಗಳಿಗೆ ಈಗಾಗಲೇ ನೀಡಿರುವ ಮಧ್ಯಂತರ ರಜೆಯನ್ನು ಮಾರ್ಪಾಡಿಸಿ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಿಗೆ ಸಂಬಂಧಿಸಿದಂತೆ ದಸರಾ ಹಬ್ಬದ ಪ್ರಯುಕ್ತ ಶಾಲೆಗಳಿಗೆ ಮಧ್ಯಂತರ ರಜೆಯನ್ನು ಸೆ.21 ರಿಂದ ಅ.5 ರವರೆಗೆ ನಿಗಧಿಪಡಿಸಿ ಆದೇಶಿಸಿದೆ.
ಅಕ್ಟೋಬರ್ 6 ರಿಂದ ಶಾಲೆಗಳು ಎಂದಿನಂತೆ ಪುನರಾರಂಭಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅದೇ ರೀತಿ ದಸರಾ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ, ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಸೆ.21 ರಿಂದ ಅ.5 ರವರೆಗೆ ಮಧ್ಯಂತರ ರಜೆಯನ್ನು ಪರಿಷ್ಕರಿಸಿ ಆದೇಶಿಸಲಾಗಿದೆ. (ವರದಿ-ಕೆಸಿಐ, ಎಂ.ಎನ್)