ಪ್ರಮುಖ ಸುದ್ದಿಮೈಸೂರು

ಮೈಸೂರು-ಚೆನ್ನೈ ವಿಮಾನ ಹಾರಾಟಕ್ಕೆ ರಾಜ್ಯ ಖಾತೆ ಸಚಿವ ಜಯಂತ್ ಸಿನ್ಹಾ ಚಾಲನೆ

ಮೈಸೂರು,ಸೆ.20:- ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮತ್ತೆ ವಿಮಾನಗಳ ಹಾರಾಟ ಪುನರಾರಂಭಗೊಂಡಿದೆ.

ಕೇಂದ್ರ ವಿಮಾನಯಾನ ರಾಜ್ಯ ಖಾತೆ  ಸಚಿವ ಜಯಂತ್ ಸಿನ್ಹಾ ವಿಮಾನ ಹಾರಾಟ ಪುನರಾರಂಭಕ್ಕೆ ಚಾಲನೆ ನೀಡಿದರು. ಸಚಿವ ಡಾ. ಎಚ್.ಸಿ ಮಹದೇವಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ ದೇವೇಗೌಡ, ಮೇಯರ್ ಎಂ.ಜೆ ರವಿಕುಮಾರ್ ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು.

ಕೇಂದ್ರದ ಉಡಾನ್ ಯೋಜನೆಯ ವಿಮಾನ ಪ್ರತಿನಿತ್ಯ ಚೆನ್ನೈನಿಂದ-ಮೈಸೂರಿಗೆ ಹಾಗೂ ಮೈಸೂರಿನಿಂದ ಚೆನ್ನೈಗೆ ಹಾರಾಟ ನಡೆಸಲಿದೆ. ಈ ಸಂಬಂಧ ಟ್ರೋಜೆಟ್ ವಿಮಾನಯಾನ ಸಂಸ್ಥೆಯ ಅಧಿಕಾರಿಗಳೊಂದಿಗೆ ಮೈಸೂರು ವಿಮಾನ ನಿಲ್ದಾಣದ ಸಲಹಾ ಸಮಿತಿ ಒಪ್ಪಂದ ಮಾಡಿಕೊಂಡಿದೆ. ಟ್ರೋಜೆಟ್ ವಿಮಾನ ಯಾನ ಸಂಸ್ಥೆ ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದು, ಒಟ್ಟು 78 ಆಸನಗಳ ವ್ಯವ್ಯಸ್ಥೆ ಹೊಂದಿರುವ ಉಡಾನ್ ಯೋಜನೆಯ ವಿಮಾನ ಪ್ರತಿನಿತ್ಯ ಹಾರಾಟ ನಡೆಸಲಿದೆ. ಚೆನ್ನೈನಿಂದ ಹೊರಟು ಪ್ರತಿನಿತ್ಯ ಸಂಜೆ 6.40 ಕ್ಕೆ ಮೈಸೂರಿಗೆ ಬರಲಿರುವ ವಿಮಾನ, ಮತ್ತೆ  ಸಂಜೆ 7.05 ಕ್ಕೆ ಚೆನ್ನೈಗೆ ಹೊರಡಲಿದೆ. ಪರಿಣಾಮ ಈ ಬಾರಿಯ ಮೈಸೂರು ದಸರಾ ಮಹೋತ್ಸವಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ. (ಆರ್.ವಿ,ಕೆ.ಎಸ್,ಎಸ್.ಎಚ್)

Leave a Reply

comments

Related Articles

error: