ಸುದ್ದಿ ಸಂಕ್ಷಿಪ್ತ

ಸೆ.21ರಂದು ಸುಯೋಗ ಆಸ್ಪತ್ರೆ ಉದ್ಘಾಟನೆ

ಮೈಸೂರು,ಸೆ.20 : ರಾಮಕೃಷ್ಣ ನಗರದ ಸುಯೋಗ ಆಸ್ಪತ್ರೆಯೂ ಸೆ.21ರಂದು ಸಂಜೆ 4ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸುವರು.

ಸಚಿವ ಡಿ.ಕೆ.ಶಿವಕುಮಾರ್ ಜ್ಯೋತಿ ಬೆಳಗಿಸುವರು, ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸುವರು. ಸಚಿವ ತನ್ವೀರ್ ಸೇಠ್, ಮೇಯರ್ ಎಂ.ಜೆ.ರವಿಕುಮಾರ್, ನರರೋಗ ತಜ್ಞ ಡಾ.ಎನ್.ಕೆ.ವೆಂಕಟರಮಣ, ಡಾ.ಯತೀಂದ್ರ ಸಿದ್ಧರಾಮ್ಯಯ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ವಾಸು, ಸಾ.ರಾ.ಮಹೇಶ್, ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಮುಡಾ ಅಧ್ಯಕ್ಷ ಧ್ರುವಕುಮಾರ್ ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: