ಕರ್ನಾಟಕ

ಜನ್ನೂರು-ನವಿಲೂರು ಕಾಂಕ್ರೀಟ್ ರಸ್ತೆ ಚರಂಡಿ ಕಾಮಗಾರಿಗೆ ಶಾಸಕ ಎಸ್.ಜಯಣ್ಣ ಚಾಲನೆ

ರಾಜ್ಯ(ಚಾಮರಾಜನಗರ) ಸೆ 20 :- ಯಳಂದೂರು ಸಮೀಪದ ಜನ್ನೂರು ಹಾಗೂ ನವಿಲೂರು ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಎಸ್.ಜಯಣ್ಣ ಗುದ್ದಲಿ ನೆರವೇರಿಸಿ ಚಾಲನೆ ನೀಡಿದರು.

ಬಳಿಕ  ಮಾತನಾಡಿದ ಅವರು ಜನ್ನೂರು ಹಾಗೂ ನವಿಲೂರು ಗ್ರಾಮದಲ್ಲಿ ರಸ್ತೆಯು ತುಂಬಾ ಹಾಳಾಗಿದ್ದು, ಜನರು ತಿರುಗಾಡುವುದೇ ತುಂಬಾ ದುಸ್ತರವಾಗಿತ್ತು. ಈ ಹಿನ್ನಲೆಯಲ್ಲಿ ಗ್ರಾಮಸ್ಥರಿಂದ ಅನೇಕ ದೂರುಗಳು ತಮ್ಮ ಗಮನಕ್ಕೆ ಬಂದಿದ್ದು,ಸರ್ಕಾರದ ಲೊಕೋಪಯೋಗಿ ಇಲಾಖೆ ವತಿಯಿಂದ ಎಸ್.ಇ.ಪಿ. ಹಾಗೂ ಟಿ.ಎಸ್.ಪಿ. ಯೋಜನೆಯಡಿ ಈ ಎರಡು ಗ್ರಾಮಗಳ ರಸ್ತೆಗಳನ್ನು 40 ಲಕ್ಷರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗಳನ್ನಾಗಿ ರೂಪಿಸಲಾಗುವುದು ಎಂದ ಅವರು ನೀರು ಸರಾಗವಾಗಿ ಹರಿಯಲು ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳನ್ನು ನಿರ್ಮಿಸಲಾಗುವುದೆಂದು ತಿಳಿಸಿದರು. ಜೊತೆಗೆ ಕಾಮಗಾರಿಯನ್ನು ತೆಗೆದುಕೊಂಡ ಗುತ್ತಿಗೆದಾರರು ಗುಣ ಮಟ್ಟದಲ್ಲಿ ನಿರ್ಮಿಸಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ರಸ್ತೆ ಹಾಗೂ ಚರಂಡಿಯನ್ನು ತಮ್ಮ ಗ್ರಾಮಗಳಿಗೆ ಗುಣಮಟ್ಟದಿಂದ ಹಾಗೂ ವೈಜ್ಞಾನಿಕವಾಗಿ ನಿರ್ಮಾಣ ಮಾಡಿಕೊಡುವಂತೆ ಕ್ಷೇತ್ರದ ಶಾಸಕರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಾಲರಾಜು, ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್, ಮಾಜಿ ಸದಸ್ಯ ಪುಟ್ಟಬುದ್ದಿ, ತಾ.ಪಂ.ಅಧ್ಯಕ್ಷ ಹೊಂಗನೂರು ಚಂದ್ರು, ಕಿಟ್ಟಪ್ಪ, ತೋಟೇಶ್, ಡಿ.ಪಿ.ಪ್ರಕಾಶ್, ಸಂತೇಮರಹಳ್ಳಿ ಸಿದ್ದಲಿಂಗಸ್ವಾಮಿ, ಶಾಂತರಾಜು, ಮಹಾದೇವಪ್ರಸಾದ್, ಹೊಂಗನೂರು ಮಹಾದೇವಸ್ವಾಮಿ, ಕಿನಕಹಳ್ಳಿ ರಾಚಯ್ಯ, ಸೇರಿದಂತೆ ಇತರರು ಹಾಜರಿದ್ದರು. (ಜಿ.ಎನ್,ಎಸ್.ಎಚ್)

Leave a Reply

comments

Related Articles

error: