ಮೈಸೂರು

ವಿದೇಶಿ ಒಪ್ಪಂದಗಳಿಂದ ಪ್ರಜಾಪ್ರಭುತ್ವವನ್ನು ಸದುಪಯೋಗಪಡಿಸಿಕೊಳ್ಳಬೇಕು : ಶ್ವೇತಶ್ರೀ. ಎ

ಮೈಸೂರು,ಸೆ.20:- ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ವೇತಶ್ರೀ ಎ  ಮಾತನಾಡಿ ಜನರು ಹೇಗೆ ಸ್ಥಳೀಯ ಸರ್ಕಾರ, ಗ್ರಾಮ ಪಂಚಾಯಿತಿ, ಸಂವಿಧಾನಾತ್ಮಕ ಹಕ್ಕುಗಳ ಮೂಲಕ, ವಿದೇಶಿ ಒಪ್ಪಂದಗಳಿಂದ ಪ್ರಜಾಪ್ರಭುತ್ವವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ  ಡಾ. ಎಂ. ಶಾರದ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಾನಗರ ಪಾಲಿಕೆಯ ಪಾತ್ರ ಹಾಗೂ ಪಾಲಿಕೆ ಸದಸ್ಯರು ಹಾಗೂ ಮೇಯರ್, ಉಪಮೇಯರ್‍ರವರ ಕಾರ್ಯಗಳು, ಅಧಿಕಾರಗಳು ಮತ್ತು ಲೋಕೋಪಯೋಗಿ ಸ್ಥಾಯಿ ಸಮಿತಿ, ಆರೋಗ್ಯ ಸ್ಥಾಯಿ ಸಮಿತಿ, ತೋಟಗಾರಿಕಾ ಸ್ಥಾಯಿ ಸಮಿತಿ, ಇತರ ಸಮಿತಿಗಳು ಸಾರ್ವತ್ರಿಕ ಚುನಾವಣೆಯ ನಂತರ ಜಾರಿಗೆ ಬರುತ್ತದೆ. ಇದರಲ್ಲಿ 7 ಜನ ಸದಸ್ಯರು ಇರುತ್ತಾರೆ. 1946ರ ಪ್ರಕಾರ ಪ್ರಮಾಣ ವಚನವನ್ನು 3 ತಿಂಗಳೊಳಗೆ ಸ್ವೀಕಾರ ಮಾಡಬೇಕು. ನಗರ ಪಾಲಿಕೆಯ ಕಡ್ಡಾಯ ಕಾರ್ಯಗಳು ವಿವೇಚನಾ ಕಾರ್ಯಗಳ ಬಗ್ಗೆ ತಿಳಿಸಿದರು.

ವಿದ್ಯಾರ್ಥಿನಿಯರಾದ ನಾಗಲಾಂಬಿಕ, ಪೂರ್ಣಿಮಾ, ಲಕ್ಷ್ಮಿ, ಪಲ್ಲವಿ, ತೇಜಸ್ವಿನಿ, ಜ್ಯೋತಿ, ಮಾನಸ  ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: