ಕರ್ನಾಟಕ

ಎಸ್ಎಸ್ಎಫ್ ವತಿಯಿಂದ ಧ್ವಜ ದಿನಾಚರಣೆ

ಸೋಮವಾರಪೇಟೆ,ಸೆ.20-ಸಮೀಪದ ಕಲ್ಕಂದೂರು ಮತ್ತು ಗರಗಂದೂರು ಗ್ರಾಮದಲ್ಲಿ ಎಸ್‍ಎಸ್‍ಎಫ್ ಶಾಖೆ ವತಿಯಿಂದ ಧ್ವಜ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಲ್ಕಂದೂರು ಜುಮಾ ಮಸೀದಿಯ ಆವರಣದಲ್ಲಿ ಗರಗಂದೂರಿನ ಮುಸ್ತಫ ಸಖಾಫಿ ಅವರು ಧ್ವಜಾರೋಹಣ ನೆರವೇರಿಸಿದರು. ಸಮದ್ ನಿಜಾಮಿ ಸಂದೇಶ ಭಾಷಣ ಮಾಡಿದರು. ಅಜೀಜ್ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭ ಕಲ್ಕಂದೂರು ಜುಮಾ ಮಸೀದಿ ಅಧ್ಯಕ್ಷ ಉಮ್ಮರ್, ಕಾರ್ಯದರ್ಶಿ ಸಿದ್ದೀಕ್, ಎಸ್‍ಎಸ್‍ಎಫ್ ಶಾಖೆಯ ಕಾರ್ಯದರ್ಶಿ ಅಬ್ದುಲ್ ಶಾಫಿ, ಪದಾಧಿಕಾರಿಗಳಾದ ಇಸ್ಮಾಯಿಲ್, ಹಾರಿಸ್, ಅಜೀಜ್, ಮುಜೀಬ್, ಎಸ್‍ವೈಎಸ್‍ನ ಪದಾಧಿಕಾರಿಗಳಾದ ಆಲಿ ಸಖಾಫಿ, ಬಾಪುಟ್ಟಿ, ಹಸೈನಾರ್, ಇಸ್ಮಾಯಿಲ್ ಸೇರಿದಂತೆ ಇತರರು ಇದ್ದರು.
ಗರಗಂದೂರಿನಲ್ಲಿ: ಗರಗಂದೂರಿನ ಎಸ್‍ಎಸ್‍ಎಫ್ ಶಾಖೆ ವತಿಯಿಂದ ಧ್ವಜ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಜಮಾತ್ ಅಧ್ಯಕ್ಷ ಹನೀಫ್, ಕಾರ್ಯದರ್ಶಿ ಅಬ್ದುಲ್ ರಹಮಾನ್, ಎಸ್‍ಎಸ್‍ಎಫ್ ಅಧ್ಯಕ್ಷ ಹಂಸ ಸಅದಿ, ಕಾರ್ಯದರ್ಶಿ ರಂಶಾದ್, ಪದಾಧಿಕಾರಿಗಳಾದ ಶಾದುಲಿ, ಶರೀಫ್, ರಶೀದ್ ಮತ್ತಿತರರು ಇದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: