
ಕರ್ನಾಟಕ
ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾಗಿ ಎಚ್.ಆರ್.ಶೋಭರಾಜು ಆಯ್ಕೆ

ಸೋಮವಾರಪೇಟೆ,ಸೆ.20-ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾಗಿ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಎಚ್.ಆರ್. ಶೋಭರಾಜು ಆಯ್ಕೆಯಾಗಿದ್ದಾರೆ.
ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆದ ಯುವ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು. ಯುವ ಒಕ್ಕೂಟದ ಉಪಾಧ್ಯಕ್ಷರಾಗಿ ಎಂ.ಡಿ.ಹರೀಶ್, ಕಾರ್ಯದರ್ಶಿಯಾಗಿ ಚಂದ್ರಿಕಾ, ಖಜಾಂಚಿಯಾಗಿ ರಾಜು, ಮಹಿಳಾ ಉಪಾಧ್ಯಕ್ಷರಾಗಿ ಚಂದ್ರಾವತಿ ಅವರುಗಳನ್ನು ನಿಯೋಜಿಸಲಾಯಿತು. ಇದೇ ಸಂದರ್ಭ ಕಾರ್ಯಕಾರಿ ಮಂಡಳಿಗೆ 23ಮಂದಿ ನಿರ್ದೇಶಕರುಗಳನ್ನು ನೇಮಿಸಲಾಯಿತು. (ವರದಿ-ಕೆಸಿಐ, ಎಂ.ಎನ್)