
ಕರ್ನಾಟಕ
ಮತ್ಸ್ಯ ಆಶಾಕಿರಣ ಯೋಜನೆಯಡಿ ಹೊನ್ನಮ್ಮನ ಕೆರೆಗೆ ಬಿತ್ತನೆ ಮೀನುಮರಿಗಳು
ಸೋಮವಾರಪೇಟೆ,ಸೆ.20-ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಸಮೀಪದ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆಗೆ ಮತ್ಸ್ಯ ಆಶಾಕಿರಣ ಯೋಜನೆಯಡಿ ಬಲಿತ ಹುಲ್ಲುಗೆಂಡೆ ಮತ್ತು ಮೃಗಾಲ್ ತಳಿಯ ಬಿತ್ತನೆ ಮೀನುಮರಿಗಳನ್ನು ಬಿಡಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯ ಬಿ.ಜೆ. ದೀಪಕ್, ದೇವಾಲಯ ಸಮಿತಿ ಅಧ್ಯಕ್ಷ ಡಿ.ಎ. ಸೋಮಶೇಖರ್, ಕಾರ್ಯದರ್ಶಿ ರುದ್ರಪ್ಪ, ಸದಸ್ಯ ಡಿ.ಬಿ. ಲೋಕೇಶ್, ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಅವರುಗಳು ಈ ಸಂದರ್ಭ ಇದ್ದರು. (ವರದಿ-ಕೆಸಿಐ, ಎಂ.ಎನ್)