ಮೈಸೂರು

ಕೆಲವೇ ಕ್ಷಣಗಳಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ : ಮಂಜಿನಿಂದ ಆವೃತಗೊಂಡಿದೆ ಚಾಮುಂಡಿ ಬೆಟ್ಟ

ಮೈಸೂರು,ಸೆ.21:- ಚಾಮುಂಡಿ ಬೆಟ್ಟದಲ್ಲಿ ಮಂಜಿನ ಕಲರವಗಳೆದ್ದಿವೆ. ಬೆಳ್ಳಂ ಬೆಳಿಗ್ಗೆ ಗಿರಿ ಶಿಖರಗಳು ಮಂಜು ಹೊದ್ದು ನಿಂತಿವೆ. ಮಹಿಷಾಸುರ ಪ್ರತಿಮೆ, ಚಾಮುಂಡಿ ದೇವಸ್ಥಾನ, ಉದ್ಘಾಟನೆ ವೇದಿಕೆ ಸಂಪೂರ್ಣ ಮಂಜಿನಿಂದ ಆವೃತಗೊಂಡಿದೆ.

ಬೆಟ್ಟದ ರಸ್ತೆಯಲ್ಲಿ ರಂಗೋಲಿ ಬರೆದು ಕಾರ್ಯಕ್ರಮಕ್ಕೆ ಸಿದ್ದತೆಗಳು ನಡೆದಿವೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ದಸರಾ ಮಹೋತ್ಸವಕ್ಕೆ ನಿತ್ಯೋತ್ಸವ ಕವಿಯಿಂದ ಚಾಲನೆ ದೊರಕಲಿದೆ. ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ದಸರಾ ಉದ್ಘಾಟನೆಗೆ ಮದುವಣಗಿತ್ತಿಯಂತೆ  ಚಾಮುಂಡಿ ಬೆಟ್ಟ ಸಿಂಗಾರಗೊಂಡಿದೆ. 8 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ದೇವಿಗೆ ಅಗ್ರ ಪೂಜೆ ಸಲ್ಲಿಸುವುದರೊಂದಿಗೆ ದಸರಾಗೆ ನಾಂದಿಯಾಗಿದ್ದು, 8:45 ಕ್ಕೆ ಶುಭ ತುಲ ಲಗ್ನದಲ್ಲಿ ಅಧಿಕೃತವಾಗಿ ಉದ್ಘಾಟನೆಗಳ್ಳೊಲಿದೆ. ನಾಡೋಜ ನಿಸಾರ್ ಅಹ್ಮದ್ ರಿಂದ ದಸಾರಾಗೆ ಚಾಲನೆ ದೊರಕಲಿದ್ದು, ಸಿ.ಎಂ ಸಿದ್ದರಾಮಯ್ಯ, ಮೈಸೂರು ಉಸ್ತುವಾರಿ ಸಚಿವ ಎಚ್.ಸಿ ಮಹದೇವ ಪ್ರಸಾದ್, ಶಾಸಕ ಜಿ.ಟಿ ದೇವೇಗೌಡ ಸಾಥ್ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ  ವೇದಿಕೆ ಸಿದ್ಧಗೊಂಡಿದ್ದು, ಸಾವಿರಕ್ಕೂ ಹೆಚ್ಚು ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

ವಿಶ್ವವಿಖ್ಯಾತ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ  ಚಾಮುಂಡಿ ಬೆಟ್ಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಆಪ್ತರೊಂದಿಗೆ ಆಗಮಿಸಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಆಪ್ತರೊಂದಿಗೆ ಆಗಮಿಸಿ ದರ್ಶನ ಪಡೆದರು. (ಆರ್.ವಿ,ಎಸ್.ಎಚ್)

Leave a Reply

comments

Related Articles

error: