ಪ್ರಮುಖ ಸುದ್ದಿಮೈಸೂರು

ದಸರಾ ಮಹೋತ್ಸವಕ್ಕೆ ಗರುಡಾ ಫೋರ್ಸ್ ಕಾವಲು : ಚಾಮುಂಡಿ ಬೆಟ್ಟದಲ್ಲಿ ಗಸ್ತು ನಡೆಸುತ್ತಿದೆ ಬ್ಲ್ಯಾಕ್ ಕಮಾಂಡೋ

ಮೈಸೂರು,ಸೆ.21:- ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಗರುಡಾ ಫೋರ್ಸ್ ಕಾವಲಿರಲಿದ್ದು, ಚಾಮುಂಡಿ ಬೆಟ್ಟದಲ್ಲಿ ಇದೀಗ ಗಸ್ತು ತಿರುಗುತ್ತಿದ್ದಾರೆ.

ದಸರಾ ಮಹೋತ್ಸವದಲ್ಲಿ ಯಾವುದೇ ಉಗ್ರರ ಕರಿನೆರಳು ಬೀಳಬಾರದು ಎಂಬ ಹಿನ್ನೆಲೆಯಲ್ಲಿ, ಅಷ್ಟೇ ಅಲ್ಲದೇ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಹಿನ್ನೆಲೆಯಲ್ಲಿ ಗರುಡಾ ಫೋರ್ಸ್ ತಂಡದ ಮುಖ್ಯಸ್ಥ ಮಂಜುಕುಮಾರ್ ಮತ್ತು ವೆಂಕಟೇಶ್ ನೇತೃತ್ವದಲ್ಲಿ ಕಾವಲು ಕಾಯಲಾಗುತ್ತಿದೆ. 40ಕ್ಕೂ ಹೆಚ್ಚು ಮಂದಿ ತಂಡದಲ್ಲಿದ್ದು, ದಸರಾ ಮುಗಿಯುವವರೆಗೂ ನಗರದಲ್ಲಿ ಸರ್ಪಗಾವಲು ಹಾಕಲಿದ್ದಾರೆ.

ಅವರು ಯಾವುದೇ ವಾಹನ ಅಥವಾ ಯಾವುದೇ ವ್ಯಕ್ತಿಯನ್ನು ತಪಾಸಣೆಗೊಳಪಡಿಸಿ, ಪ್ರಶ್ನಿಸುವ ಅಧಿಕಾರವನ್ನು ಹೊಂದಿದ್ದು, ಯಾರೂ ಅವರ ಬಳಿ ಕ್ಯಾತೆ ತೆಗೆಯುವಂತಿಲ್ಲ. ಅಂಥಹ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಈಗಾಗಲೇ  ದಸರಾ ಆಚರಣೆಗೆ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.  ದಸರಾ ಭದ್ರತೆಗಾಗಿ 5056 ಪೊಲೀಸರನ್ನು  ನಿಯೋಜಿಸಲಾಗಿದ್ದು, ಕ್ಷಿಪ್ರ ಕಾರ್ಯಚರಣೆಗೆ 70 ಕಮಾಂಡೋ ಪಡೆ,60 ಕೆಎಸ್ ಆರ್ ಪಿ ಹಾಗೂ ಸಿಆರ್/ಡಿಆರ್ ತುಕಡಿಗಳು, 49 ಭದ್ರತಾ ತಪಾಸಣಾ ಪಡೆಗಳು, 1600 ಹೋಂ ಗಾರ್ಡ್ಸ್ ನಿಯೋಜಿಸಲಾಗಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: