ಮೈಸೂರು

ಆರೋಗ್ಯ ಅಭಿಯಾನ: ಸರ್ಕಾರದ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ

ಕರ್ನಾಟಕ ರಾಜ್ಯ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆರೋಗ್ಯ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರಲ್ಲಿ ಸರ್ಕಾರ ನೀಡುವ ಆರೋಗ್ಯ ಯೋಜನೆಯ ಉಪಯೋಗದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಅರೋಗ್ಯ ಅಭಿಯಾನಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವ ಪ್ರಸಾದ್ ಚಾಲನೆ ನೀಡಿದರು. ಮುಂದಿನ ಒಂದೂವರೆ ತಿಂಗಳುಗಳ ಕಾಲ ಸುವರ್ಣ ಆರೋಗ್ಯ ಟ್ರಸ್ಟ್ ನಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಬೀದಿನಾಟಕಗಳು ಮತ್ತು ಸಮೂಹ ಗೀತೆಗಳು ಸೇರಿವೆ. ಮೈಸೂರು, ಹುಣಸೂರು, ಪಿರಿಯಾಪಟ್ಣ, ಕೆ.ಆರ್.ನಗರದ 186ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ.

ಬಿಪಿಎಲ್ ಅಷ್ಟೇ ಅಲ್ಲದೇ ಎಪಿಎಲ್ ನಡಿ ಬರುವ ಕುಟುಂಬಗಳಲ್ಲಿಯೂ ಈ ಆರೋಗ್ಯ ಯೋಜನೆಯ ಕುರಿತು ಮಾಹಿತಿ ನೀಡಿ ಅವರು ಅದರ ಉಪಯೋಗ ಪಡೆಯುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದ್ದು, ವಿವಿಧ ಸರ್ಕಾರಗಳ ಯೋಜನೆಗಳಾದ ವಾಜಪೇಯಿ ಆರೋಗ್ಯಶ್ರೀ ಆರೋಗ್ಯ ಯೋಜನೆಯು ಬಿಪಿಎಲ್ ಕುಟುಂಬಗಳಿಗೆ, ರಾಜೀವ್ ಆರೋಗ್ಯ ಭಾಗ್ಯ ಎಪಿಎಲ್ ಕುಟುಂಬಗಳಿಗೆ, ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಯೋಜನೆಯು ರಸ್ತೆ ಅಪಘಾತದಲ್ಲಿನ ಸಂತ್ರಸ್ತರಿಗೆ, ಬಿಪಿಎಲ್ ಕುಟುಂಬಗಳಿಗೆ ರಾಷ್ಟ್ರೀಯ ಸ್ವಾಸ್ಥ್ಯಭೀಮಾ ಹಣರಹಿತ ಯೋಜನೆಗಳು ಸೇರಿವೆ.

ಅಭಿಯಾನವು ಹುಣಸೂರಿನ 76ಗ್ರಾಮಗಳಲ್ಲಿ ನವೆಂಬರ್ 1ರಿಂದ 6ರವರೆಗೆ ನಡೆಯಲಿದ್ದು ಶಿಬಿರವನ್ನು ನವೆಂಬರ್ 7ರಂದು ಹಮ್ಮಿಕೊಳ್ಳಲಾಗಿದೆ.  ಕೆ.ಆರ್.ನಗರದ 31 ಗ್ರಾಮಗಳಲ್ಲಿ ನವೆಂಬರ್ 14ರಿಂದ 20ರವರೆಗೆ ಶಿಬಿರವನ್ನುನವೆಂಬರ್ 21ರಂದು, ಮೈಸೂರು ತಾಲೂಕಿನ 30ಗ್ರಾಮಗಳಲ್ಲಿ ನವೆಂಬರ್ 28ರಿಂದ ಡಿಸೆಂಬರ್ 4ರವರೆಗೆ, ಶಿಬಿರವನ್ನು ಡಿಸೆಂಬರ್ 5ರಂದು , ಪಿರಿಯಾಪಟ್ಣದ 49ಗ್ರಾಮಗಳಲ್ಲಿ ಡಿಸೆಂಬರ್ 12ರಿಂದ 18ರವರೆಗೆ, ಶಿಬಿರವನ್ನು ಡಿಸೆಂಬರ್ 19ರಂದು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: