ಮೈಸೂರು

ರೋಮಾಂಚಕ ಅನುಭವ ನೀಡಲಿರುವ ಜಲಸಾಹಸ ಕ್ರೀಡೆಗೆ ಇಂದು ಚಾಲನೆ

ಮೈಸೂರು, ಸೆ.21: ಮೈಸೂರು ದಸರಾ ಮಹೋತ್ಸವ-2017 ರ ಅಂಗವಾಗಿ ಮೈಸೂರಿನ ವರುಣ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ.

ಜನರಲ್ ತಿಮ್ಮಯ್ಯ ಸಾಹಸ ಕ್ರೀಡೆಗಳ ಅಕಾಡೆಮಿ ವತಿಯಿಂದ ವರುಣ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಯುವ ಸಬಲೀಕರಣ ಮತ್ತು ಮೀನುಗಾರಿಕಾ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು (ಸೆ.21) ಇಂದು 11 ಗಂಟೆಗೆ ಜಲಸಾಹಸ ಕ್ರೀಡೆಗಳನ್ನು ಉದ್ಘಾಟನೆ ಮಾಡಲಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯು ಜೆಟ್ ಸ್ಕಿ ರೈಡ್, ಬನಾನ ಬೊಟ್ ರೈಡ್, ಸ್ಪೀಡ್ ಬೊಟ್, ಕಯಾಕಿಂಗ್ ಹಾಗೂ ವಾಟರ್ ರ್ಯಾಫ್ಟಿಂಗ್ ಅನ್ನು ರಿಯಾಯಿತಿ ದರದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಪಡೆಯಬಹುದಾಗಿದೆ. ಪ್ರತಿದಿನ ಬೆಳಗ್ಗೆ 8:30 ರಿಂದ ಪ್ರಾರಂಭವಾಗಿ ಸಂಜೆ 5:30 ರವರೆಗೂ ಜಲಸಾಹಸ ಕ್ರೀಡೆಗಳು ನಡೆಯಲಿದೆ, ಸ್ಥಳದಲ್ಲಿಯೆ ಟಿಕೇಟ್ ಪಡೆದು ಜಲಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು.

(ಎನ್.ಬಿ)

Leave a Reply

comments

Related Articles

error: