
ಮೈಸೂರು
ಯುವ ದಸರಾ ಕಾರ್ಯಕ್ರಮಗಳ ವಿವರ
ಮೈಸೂರು, ಸೆ.21 : ಮೈಸೂರು ನಾಡಹಬ್ಬ ದಸರಾ ಅಂಗವಾಗಿ ನಡೆಯುವ ಯುವ ದಸರಾದ ಕಾರ್ಯಕ್ರಮದ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿ ನಡೆಯಿತು.
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವ ದಸರಾ ಉಪಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಅವರು ಮಾತನಾಡಿ, ಸೆ. 22 ರಿಂದ 29 ರವರೆಗೆ ಯುವ ಸಂಭ್ರಮ ನಡೆಯಲಿದೆ. ಸೆ. 22 ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರು ಉದ್ಘಾಟಿಸುವರು. ಈ ವೇಳೆ ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಮತ್ತು ರಚಿತರಾಮ್ ಬರಲಿದ್ದಾರೆ ಎಂದು ತಿಳಿಸಿದರು.
ಪ್ರತಿದಿನದ ಕಾರ್ಯಕ್ರಮಗಳ ವೇಳಾ ಪಟ್ಟಿ :
- ಸಂಜೆ 6 ರಿಂದ 7ರ ವರೆಗೆ ಯುವ ಸಂಭ್ರಮದಲ್ಲಿ ಪಾಲ್ಗೊಂಡು ಆಯ್ಕೆಯಾದ ಕಾಲೇಜುಗಳಿಂದ ನೃತ್ಯ ಪ್ರದರ್ಶನ.
- ಸಂಜೆ 7 ರಿಂದ 8 ರವರೆಗೆ ರಾಜ್ಯದ ವಿವಿಧ ಭಾಗಗಳಿಂದ ಬರುವ ಖ್ಯಾತ ಕಲಾವಿದರ ತಂಡಗಳಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.
- ಸೆಪ್ಟೆಂಬರ್ 22 ರಂದು 8 ಗಂಟೆಗೆ ದಿಲ್ ಸೆ ದಿಲ್ ಖ್ಯಾತಿಯ ಫಲಾಕ್ ಮಚ್ಚಲ್ ಸಹೋದರಿಂದ ಕಾರ್ಯಕ್ರಮ.
- ಸೆಪ್ಟೆಂಬರ್ 23 ರಂದು ಬಾಲಿವುಡ್ ಹಿನ್ನಲೆ ಗಾಯಕ ಕನ್ನಡ ಪ್ರತಿಭೆ ನಕಾಶ್ ಅಜೀಜ್ ಅವರಿಂದ ಕಾರ್ಯಕ್ರಮ.
- ಸೆಪ್ಟೆಂಬರ್ 24 ರಂದು ಕೋಕ್ ಕಲಾ ಕಂಪನಿಯ ಪ್ರಾಯೋಜಕತ್ವದಲ್ಲಿ ಕೋಕ್ ಸ್ಟುಡಿಯೋ ಪ್ಯಾನನ್ ಅವರಿ ಕಾರ್ಯಕ್ರಮ.
- ಸೆಪ್ಟೆಂಬರ್ 25 ರಂದು ಟಿ.ವಿ.ಎಸ್ ಮತ್ತು ಕೆನರಾಬ್ಯಾಂಕ್ ಪ್ರಾಯೋಜಜತ್ವದಿಂದ ಅರ್ಜುನ್ ಜನ್ಯ ರಿಂದ ಸಂಗೀತ ಕಾರ್ಯಕ್ರಮ.
- ಸೆಪ್ಟೆಂಬರ್ 26 ರಂದು ಬಾಲಿವುಡ್ ಯೂತ್ಸ್ ದಿವ್ಯಕುಮಾರ್ ಮತ್ತು ಶಿಫಾಲಿ ಅವರಿಂದ ಕಾರ್ಯಕ್ರಮ.
- ಸೆಪ್ಟೆಂಬರ್ 27 ರಂದು ರೆಡ್ ಬುಲ್ ಟೂರ್ ಬಸ್ (ರೆಡ್ ಬುಲ್ ಪ್ರಾಯೋಜಕತ್ವ) ಮೈಸೂರಿನ ಪ್ರಖ್ಯಾತ ವಾಸು ದೀಕ್ಷಿತ್ ಅವರ ಸ್ವರಾಂತ್ಯ ತಂಡ ಹಾಗೂ ಬಾಲಿವುಡ್ ಗಾಯಕ ಸಿದ್ದಾರ್ಥ ಮಹದೇವನ್ ಅವರಿಂದ ಕಾರ್ಯಕ್ರಮ.
- ಸೆಪ್ಟೆಂಬರ್ 28 ರಂದು ಸ್ಯಾಂಡಲ್ವುಡ್ (ಪ್ರಾಯೋಜಕತ್ವ) ಧ್ರುವ ಸರ್ಜಾ, ಇತರೆ ಕಲಾವಿದರು.
- ಸೆಪ್ಟೆಂಬರ್ 29 ರಂದು ಗಂಧದಗುಡಿ ಸ್ಟಾರ್ನೈಟ್ (ಪ್ರಾಯೋಜಕತ್ವ) –ದರ್ಶನ್ ಮತ್ತು ಇತರರಿಂದ ಕಾರ್ಯಕ್ರಮ.
- ಯುವ ಅನ್ವೇಷಣೆ ಕಾರ್ಯಕ್ರಮ ಸೆಪ್ಟೆಂಬರ್ 23, 24 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಗೆ ಕಲಾಮಂದಿರದಲ್ಲಿ ಕಾರ್ಯಕ್ರಮ.
(ಎನ್.ಬಿ)