ಮೈಸೂರು

ಮೈಸೂರು ನಗರವಾಸಿಗಳು ಆಧಾರ್ ಮಾಹಿತಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

ಮೈಸೂರು, ಸೆ.20 : ಮೈಸೂರು ನಗರ ಪ್ರದೇಶದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ವೃದ್ಧಾಪ್ಯ, ಸಂಧ್ಯಾಸುರಕ್ಷಾ, ವಿಧವಾ, ಮೈತ್ರಿ, ಮತ್ತು ಅಂಗವಿಕಲ ವೇತನ ಪಡೆಯುತ್ತಿರುವ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಜಿಲ್ಲಾ ಖಜಾನೆ ವೇತನ ಬಟವಾಡೆಗೆ ನೊಂದಾಯಿಸಲಾಗುತ್ತಿದೆ.

ಮೈಸೂರು ನಗರ ಪ್ರದೇಶದಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ವೇತನ ಪಡೆಯುತ್ತಿರುವವರಲ್ಲಿ ಇಲ್ಲಿಯವರೆಗೆ ಆಧಾರ ದಾಖಲೆ ಮೈಸೂರು ತಾಲ್ಲೂಕು ತಹಶೀಲ್ದಾರ್ ಕಚೇರಿಗೆ ನೀಡದ ಫಲಾನುಭವಿಗಳು ವೇತನ ಮಂಜೂರಾತಿ ಆದೇಶ ಪ್ರತಿ, ಎಂ.ಓ.ರಶೀತಿ, ಬ್ಯಾಂಕ್-ಪೋಸ್ಟ್ ಆಫೀಸ್ ಪಾಸ್ ಪುಸ್ತಕದ ನಕಲು ಪ್ರತಿ ಮತ್ತು ಆಧಾರ್ ಕಾರ್ಡ್ ನಕಲು ಪ್ರತಿಯನ್ನು ಲಗತ್ತಿಸಿ, ಮೈಸೂರು ನಗರದ ನಜರ್‍ಬಾದ್‍ನಲ್ಲಿರುವ ಮಿನಿ ವಿಧಾನಸೌಧ ತಾಲ್ಲೂಕು ಕಚೇರಿ ಕೊಠಡಿ ಸಂಖ್ಯೆ 5ರಲ್ಲಿ ನಗರದ ರಾಜಸ್ವನಿರೀಕ್ಷಕರಿಗೆ ಸೆ.30 ರೊಳಗೆ ಸಲ್ಲಿಸುವುದು ತಪ್ಪಿದ್ದಲ್ಲಿ ಮೈಸೂರು ನಗರದಲ್ಲಿ ವಾಸವಿರುವುದಿಲ್ಲವೆಂದು ವೇತನವು ಸ್ಥಗಿತವಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.

(ಎನ್.ಬಿ)

Leave a Reply

comments

Related Articles

error: