ಪ್ರಮುಖ ಸುದ್ದಿಮೈಸೂರು

ಸಾಮಾನ್ಯನ ಜೊತೆ ಸಾಮಾನ್ಯರಾದ ಸಚಿವ ಯು.ಟಿ.ಖಾದರ್ : ಟೀ ಸ್ಟಾಲ್ ಮುಂದೆ ಉಪಹಾರ ಸೇವನೆ

ಮೈಸೂರು,ಸೆ.21:- ಸಚಿವರೆಂದರೆ ಜನಸಾಮಾನ್ಯರಂತಲ್ಲ. ಕಾರಿನಲ್ಲಿ ಟಿಪ್ ಟಾಪ್ ಆಗಿ ಬಂದು ಐಶಾರಾಮಿ ಹೋಟೆಲ್ ಮುಂದೆ ಕಾರು ನಿಲ್ಲಿಸಿ ಅಲ್ಲಿಯೇ ಅವರ ಹಸಿವನ್ನು ಇಂಗಿಸಿಕೊಳ್ಳುತ್ತಾರೆಂಬ ಭಾವನೆ ಇದೆ. ಆದರೆ ಇಲ್ಲೋರ್ವ ಸಚಿವರು ಬೆಳ್ಳಂಬೆಳಿಗ್ಗೆ ಕಣ್ಣಿಗೆ ಬಿದ್ದರು ಅದು ಎಲ್ಲಿ ಗೊತ್ತಾ ಪುಟ್ಟ ಟೀ ಸ್ಟಾಲ್ ಮುಂದೆ.

ಎಲ್ಲರೂ ದಸರಾ ಮಹೋತ್ಸವದ ಕ್ಷಣಗಣನೆಗೆ ಕುತೂಹಲದಿಂದ ಕಾಯುತ್ತಿದ್ದರೆ ಇವರು ಮಾತ್ರ ನಿರುಮ್ಮಳರಾಗಿ ಪುಟ್ಟ ಟೀ ಸ್ಟಾಲ್ ಮುಂದೆ ಉಪಹಾರ ಸೇವಿಸುತ್ತಿದ್ದರು. ಎಲ್ಲರ ದೃಷ್ಟಿಯೂ ಅವರತ್ತಲೇ ಹರಿದಿತ್ತು. ಹಲವರ ಕ್ಯಾಮರಾಗಳಲ್ಲಿ ಈ ದೃಶ್ಯ ಸೆರೆಯಾದವು.ಅವರಾರೆಂದು ತಿಳಿಯುವ ಕುತೂಹಲನಾ ಅವರೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಯು.ಟಿ.ಖಾದರ್. ಅವರು ಸರಳತೆಯನ್ನೇ ಮೈಗೂಡಿಸಿಕೊಂಡ ವ್ಯಕ್ತಿ. ಯಾವತ್ತೂ ಆಡಂಬರದಿಂದ ಮೆರೆದವರಲ್ಲ. ಅವರ ಈ ಸರಳತನ ಅವರನ್ನು ಹತ್ತಿರದಿಂದ ನೋಡಿದವರಿಗೆ ತಿಳಿದಿದೆ. ಅಷ್ಟೇ ಅಲ್ಲ ಅವರು ತಾವು ಸಾಗುವ ಮಾರ್ಗದಲ್ಲಿ ಯಾರಿಗಾದರೂ ಅಪಘಾತವಾಗಿದ್ದರೆ ತಾವೇ ಖುದ್ದು ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಆದರೆ ಇದೀಗ ಅವರ ಮತ್ತೊಂದು ಸರಳತೆಯ ಪರಿಚಯ ಜನರಿಗಾಯಿತು. ತಾನೂ ಕೂಡ  ಸಾಮಾನ್ಯ ಎಂದು ಜನಸಾಮಾನ್ಯನ ಜೊತೆ ಟೀ ಸ್ಟಾಲ್ ಮುಂದೆ ಬೆಳಗಿನ ಉಪಹಾರ ಸೇವಿಸುವ ಮೂಲಕ ಸಾಬೀತು ಪಡಿಸಿದರು.  ಈ ಸಂದರ್ಭ ಆಹಾರ ಇಲಾಖೆಯ ಉಪನಿರ್ದೇಶಕ ಕಾ.ರಾಮೇಶ್ವರಪ್ಪ ಇದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: