ಮೈಸೂರು

ಚಾಮುಂಡಿ ಬೆಟ್ಟದಲ್ಲಿ ಪೊಲೀಸ್ ಸಹಾಯಕೇಂದ್ರಕ್ಕೆ ಸಿಎಂ ಚಾಲನೆ

ಮೈಸೂರು, ಸೆ.20:  ದಸರಾ ನಾಡಹಬ್ಬದ ಅಂಗವಾಗಿ  ಸಾರ್ವಜನಿಕರಿಗೆ, ಪ್ರವಾಸಿಗರಿಗೆ ದಸರಾ ಮತ್ತು ಪ್ರವಾಸಿ ಮಾಹಿತಿ ನೀಡಲು ಹಾಗೂ ಅಗತ್ಯವಿರುವವರಿಗೆ ಪೊಲೀಸ್ ಸಹಾಯ ನೀಡಲು ಸೆ.21ರಿಂದ 30ರ ವರೆಗೆ ನಗರದ 30 ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಹಾಯ ಕೇಂದ್ರಗಳನ್ನು ತೆರೆಯಲಾಗಿದ್ದು ಚಾಮುಂಡಿ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಪ್ರವಾಸಿಗರಿಗೆ ಸರಿಯಾದ ಮಾಹಿತಿ ನೀಡಿ, ಅವರು ಮೈಸೂರು ಕುರಿತು ಅರಿತುಕೊಳ್ಳಲಿ ಎಂದು ತಿಳಿಸಿದರು. ಕೆಲವರು ಇದೇ ಮೊದಲ ಬಾರಿಗೆ ಮೈಸೂರಿಗೆ ಬಂದವರೂ ಇರುತ್ತಾರೆ ಅವರಿಗೂ ಸರಿಯಾದ ಮಾಹಿತಿ ನೀಡಿ ಎಂದರು.

ಈ ಸಂದರ್ಭ ಸಚಿವರಾದ ಡಾ.ಮಹದೇವಪ್ಪ, ತನ್ವೀರ್ ಸೇಠ್, ಯು.ಟಿ.ಖಾದರ್, ಶಾಸಕ ಎಂ.ಕೆ.ಸೋಮಶೇಖರ್,ವಾಸು, ಸಂಸದರಾದ ಧ್ರುವನಾರಾಯಣ್, ಪ್ರತಾಪ್ ಸಿಂಹ, ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್  ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: