ಪ್ರಮುಖ ಸುದ್ದಿಮೈಸೂರು

ಸಂಪೂರ್ಣ ಮೈಸೂರ್ ನೋಡಬಹುದಲ್ರೀ : ಬೈನಾಕ್ಯೂಲರ್ ವ್ಯೂ ಪಾಯಿಂಟ್ ಗೆ ಚಾಲನೆ ನೀಡಿದ ಸಿಎಂ

ಮೈಸೂರು,ಸೆ.21:-  ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನೂತನವಾಗಿ ನಿರ್ಮಿಸಲಾದ ಬೈನಾಕ್ಯೂಲರ್  ವ್ಯೂ ಪಾಯಿಂಟ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಬೈನಾಕ್ಯೂಲರ್  ಮೂಲಕ ವೀಕ್ಷಿಸಿದ ಅವರು ನಮ್ಮ ಇಡೀ ಮೈಸೂರನ್ನು ಇಲ್ಲಿಂದಲೇ ನೋಡಬಹುದಲ್ರೀ ಎಂದು ತಮ್ಮದೇ ದಾಟಿಯಲ್ಲಿ ನುಡಿದರು. ಬರುವ ಪ್ರವಾಸಿಗರಿಗೆ ಇಡೀ ಮೈಸೂರನ್ನು  ನೋಡಲು ಅವಕಾಶ ಸಿಕ್ಕಿದೆ ಎಂದರು. ಈ ಸಂದರ್ಭ ಶಾಸಕರಾದ ಜಿ.ಟಿ.ದೇವೇಗೌಡ, ಎಂ.ಕೆ.ಸೋಮಶೇಖರ್,  ಸಾ.ರಾ.ಮಹೇಶ್, ಮೇಯರ್ ಎಂ.ಜೆ.ರವಿಕುಮಾರ್, ಪ್ರವಾಸೋದ್ಯಮ  ಉಪನಿರ್ದೇಶಕ ಜಗನ್ನಾಥ್ ಮತ್ತಿತರರು ಉಪಸ್ಥಿತರಿದ್ದರು.

ಮೈಸೂರಿನ ಶೈಲೇಂದ್ರ ಅಗ್ರಹಾರ್ ಎಂಬವರು ಇದನ್ನು ತರಿಸಿದ್ದು , ಈ ಸಿಸ್ಟಮ್ ಬೆಲೆ ಮೂರೂವರೆ ಲಕ್ಷರೂ ಎಂದು ಹೇಳಲಾಗಿದೆ. ಅದನ್ನು ಅಮೇರಿಕಾದಿಂದ ತರಿಸಲಾಗಿದ್ದು, ಎಲ್ಲವೂ ಸೇರಿ ಏಳೂವರೆ ಲಕ್ಷ ತಗುಲಿದೆ. ಬೈನಾಕ್ಯೂಲರ್ ನಿಂದ ಬೆಟ್ಟದ ತಪ್ಪಲಿನಲ್ಲಿ ನಿಂತು ಮೈಸೂರನ್ನು ಸುಲಭವಾಗಿ ವೀಕ್ಷಿಸಬಹುದಾಗಿದೆ.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: