
ಪ್ರಮುಖ ಸುದ್ದಿವಿದೇಶ
ಪರಮಾಣು ಅಸ್ತ್ರ ಬಳಸಿ ಭಾರತ ಸೇನೆಯನ್ನು ನಾಶಪಡಿಸಬಲ್ಲೆವು : ಪಾಕ್ ಪ್ರಧಾನಿ ಬೆದರಿಕೆ
ನ್ಯೂಯಾರ್ಕ್, ಸೆ.21 : ಪಾಕಿಸ್ತಾನದ ಬತ್ತಳಿಕೆಯಲ್ಲಿ ಅಲ್ಪಶ್ರೇಣಿಯ ಪರಮಾಣು ಶಸ್ತ್ರಾಸ್ತ್ರಗಳೂ ಇದ್ದು, ಭಾರತೀಯ ಸೇನೆಗೆ ತಕ್ಕ ಪಾಠ ಕಲಿಸಬಲ್ಲೆವು ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಶಾಹಿದ್ ಖಾಕನ್ ಅಬ್ಬಾಸಿ ಅವರು ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.
ಈ ಕುರಿತು ಬುಧವಾರ ಮಾತನಾಡಿರುವ ಅವರು, ಭಾರತೀಯ ಸೇನೆಯನ್ನು ನಿರ್ನಾಮ ಮಾಡಬಲ್ಲ ಅಲ್ಪಶ್ರೇಣಿಯ ಅಣ್ವಸ್ತ್ರಗಳು ಪಾಕಿಸ್ತಾನ ಸೇನೆಯಲ್ಲಿ ಸಾಕಷ್ಟಿವೆ. ಅಗತ್ಯ ಬಿದ್ದರೆ ನಮ್ಮ ರಕ್ಷಣೆಗಾಗಿ ನಾವು ಅವುಗಳನ್ನು ಬಳಸಲು ಪಾಕಿಸ್ತಾನ ಹಿಂಜರಿಯುವುದಿಲ್ಲ. ಪಾಕಿಸ್ತಾನದ ವಿರುದ್ಧ ಭಾರತ ಶೀತಲ ಯುದ್ಧ ಆರಂಭಿಸಿದೆ. ಆದರೆ ಇದಕ್ಕೆ ಪ್ರತಿಯಾಗಿ ನಾವು ನಮ್ಮ ಸುರಕ್ಷತೆಗಾಗಿ ಅಣ್ವಸ್ತ್ರಗಳನ್ನು ತಯಾರಿಸಿದ್ದೇವೆ ಎಂದು ಪಾಕಿಸ್ತಾನ ಪ್ರಧಾನಿ ಹೇಳಿಕೆ ನೀಡಿದ್ದಾರೆ.
ಉತ್ತರ ಕೊರಿಯಾ, ಅಮೆರಿಕಾ ದೇಶಕ್ಕೆ ಅಣ್ವಸ್ತ್ರ ಪ್ರಯೋಗದ ಬೆದರಿಕೆ ಹಾಕಿದ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಮಂತ್ರಿ ಅಬ್ಬಾಸಿ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ದಿನೇ ದಿನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪಾಗುತ್ತಿರುವ ಪಾಕಿಸ್ತಾನವು ಭಾರತ ದಾಳಿ ಮಾಡಬಹುದೆಂಬ ಭೀತಿಯಲ್ಲಿರುವುದರಿಂದ ಅಬ್ಬಾಸಿ ಅವರು ಇಂತಹ ಹೇಳಿಕೆ ನೀಡಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
(ಎನ್.ಬಿ)