ಕರ್ನಾಟಕಮೈಸೂರು

ಲೆಟ್‍ಅಸ್ ಗೋ ಗ್ರೀನ್ ಇಂಡಿಯಾ ಉದ್ಘಾಟನೆ

go green india (2)

ಲೆಟ್‍ಅಸ್ ಗೋ ಗ್ರೀನ್ ಇಂಡಿಯಾ ಸಂಘ ಇತ್ತೀಚೆಗೆ ಮೈಸೂರಿನಲ್ಲಿ ಉದ್ಘಾಟನೆಗೊಂಡಿತು. ಫೌಂಡೇಶನ್ ಲಾಂಛನವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಸೋಮಶೇಖರ ಬಿಡುಗಡೆಗೊಳಿಸಿದರು. ಅತಿಥಿಗಳಾಗಿ ಮೈಸೂರು ಮೇಯರ್ ಭೈರಪ್ಪ, ಭಾನವಿ ಆಸ್ಪತ್ರೆಯ ನಿರ್ದೇಶಕ ಡಾ. ವಿಜಯ ಕುಮಾರ್, ಮಾಜಿ ಶಾಸಕ ಮಲ್ಲಿಕಾರ್ಜುನಪ್ಪ, ಯಶಸ್ವಿನಿ ಗುಂಪಿನ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್, ಸ್ವಚ್ಛಭಾರತ ಸಮಿತಿ ಅಧ್ಯಕ್ಷ ರಾಜೀವ್, ಎನ್ ಎ ಆರ್ ಇ ಡಿ ಸಿಓ ಅಧ್ಯಕ್ಷ ಮನೋಜ್ ಲೋಧಾ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಬರಹಗಾರ ಮತ್ತು ಅಧ್ಯಕ್ಷರಾಗಿ ಜೇಸುದಾಸ್ ಆರ್, ಖಜಾಂಚಿಯಾಗಿ ದಿವ್ಯ ಜೇಸುದಾಸ್, ಕಾರ್ಯದರ್ಶಿಯಾಗಿ ಬಿರ್ ನಾರ್ಡ್,  ಟ್ರಸ್ಟಿಗಳಾಗಿ  ಅರುಣ್ ಕುಮಾರ್ ಆರ್. ಮತ್ತು ಅಬ್ರಹಾಂ ವರ್ಗೀಸ್ ನೇಮಕಗೊಂಡಿದ್ದಾರೆ. ಮರಗಿಡಗಳನ್ನು ಬೆಳೆಯುವುದು, ಬೆಳೆಸುವುದೇ ಸಂಘದ ಪ್ರಮುಖ ಉದ್ದೇಶವಾಗಿದ್ದು, ಗಿಡ ನೆಟ್ಟು ರಕ್ಷಿಸುವ ಉದ್ದೇಶಿಸುವವರಿಗೆ ಗಿಡಗಳನ್ನು ಪೂರೈಕೆ ಮಾಡಲಾಗುವುದು.

Leave a Reply

comments

Related Articles

error: