ಕರ್ನಾಟಕಪ್ರಮುಖ ಸುದ್ದಿ

ಐಟಿ ದಾಳಿ ಹಿನ್ನೆಲೆ : ಕಾಫಿಡೇ ಷೇರುದರದಲ್ಲಿ ಭಾರಿ ಕುಸಿತ

ಬೆಂಗಳೂರು, ಸೆ.21: ಎಸ್‍.ಎಂ.ಕೃಷ್ಣ ಅಳಿಯ ವಿ.ಜಿ.ಸಿದ್ದಾರ್ಥ ಅವರ ಒಡೆತನದ ಕೆಫೆ ಕಾಫಿ ಡೇ ಸಮೂಹ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಇಂದು ದಾಳಿ ನಡೆಸಿದ ಪರಿಣಾಮ ಕಾಫಿ ಡೇ ಷೇರುದರದಲ್ಲಿ ಭಾರೀ ಕುಸಿತ ಕಂಡಿದೆ.

ಬೆಂಗಳೂರು ಮತ್ತು ಗೋವಾ ವಲಯದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಿಕ್ಕಮಗಳೂರು, ಬೆಂಗಳೂರು, ಮೂಡಿಗೆರೆ, ಚೆನ್ನೈ, ಮುಂಬೈ ಸೇರಿದಂತೆ 24 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಷೇರುಪೇಟೆಯಲ್ಲಿ ಕಾಫಿಡೇ ಷೇರುಗಳು ಭಾರಿ ಕುಸಿತ ಕಂಡಿವೆ.

ವಿ.ಜಿ ಸಿದ್ದಾರ್ಥ ಅವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಅಮಾಲ್ಗಮೇಟೆಡ್ ಬಿನ್ ಕಾಫಿ ಲಿಮಿಟೆಡ್ ಸಂಸ್ಥೆಯ ಕೆಫೆ ಕಾಫಿ ಡೇ ಮಳಿಗೆಯ ಮುಖ್ಯ ಕಚೇರಿ, ಸೆರಾಯ್ ರೆಸಾರ್ಟ್, ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಗಡೆ ಹಾಗೂ ತಾಯಿ ವಾಸಂತಿ ಅವರು ವಾಸವಿರುವ ಚೇತನಹಳ್ಳಿ ಎಸ್ಟೇಟ್ ಸೇರಿದಂತೆ ಅನೇಕ ಕಡೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

(ಎನ್.ಬಿ)

Leave a Reply

comments

Related Articles

error: