ಕರ್ನಾಟಕ

ವಿದ್ಯಾರ್ಥಿಗಳ ಕೈಮೇಲೆ ಬ್ಲೂವೇಲ್ ಚಿತ್ರ : ಆತಂಕಗೊಂಡ ಶಿಕ್ಷಕರು

ಬೆಳಗಾವಿ.ಸೆ.21 : 20 ವಿದ್ಯಾರ್ಥಿಗಳ ಕೈಮೇಲೆ ಮಾರಣಾಂತಿಕ ಆಟವಾದ ಬ್ಲೂವೇಲ್ ಗೇಮ್ ಚಿತ್ರ ನೋಡಿ ಶಿಕ್ಷಕರು ಆತಂಕಗೊಂಡಿರುವ ಘಟನೆ ಬೆಳಗಾವಿಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದಿದೆ.

ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ರವಾನೆ, ವಿಚಾರಿಸಿದಾಗ ತಿಳಿದ ವಿಚಾರ ಮಾತ್ರ ತುಂಬಾ ತಮಾಷೆಯಾಗಿತ್ತು. ಸಹಪಾಠಿಗಳನ್ನು ತಮ್ಮತ್ತ ಸೆಳೆಯಲು ವಿದ್ಯಾರ್ಥಿಗಳು ಕೈಮೇಲೆ ಬ್ಲೂವೇಲ್ ಗೇಮ್ ಚಿತ್ರವನ್ನು ಕೆಂಪು ಇಂಕಿನ ಪೆನ್ನಿನಲ್ಲಿ ಬಿಡಿಸಿಕೊಂಡಿದ್ದರು. ಮಾರಣಾಂತಿಕ ಬ್ಲೂವೇಲ್ ಆಟ ಭಾರತ ಸೇರಿದಂತೆ ಜಗತ್ತಿನಾದ್ಯಂತ ಹೆಚ್ಚು ಪ್ರಚಲಿತವಾಗಿದೆ. ಹೀಗಾಗಿ ಇದರ ಪ್ರಭಾವಕ್ಕೆ ಒಳಗಾಗಿ ತಮ್ಮ ಕೈ ಮೇಲೆ ಕೆಂಪು ಬಣ್ಣದ ಪೆನ್ನಿನಿಂದ ಬ್ಲೂವೇಲ್ ಚಿತ್ರ ಬಿಡಿಸಿಕೊಂಡು ಬೇರೆ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆಯುವ ಉದ್ದೇಶ ಹೊಂದಲಾಗಿತ್ತು. ಹೀಗಾಗಿ ತಾವು ಬ್ಲೂ ವೇಲ್ ಗೇಮ್ ಆಡಲಿಲ್ಲ. ಬದಲಾಗಿ ಬೇರೆ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆಯಲು ಹೀಗೆ ಮಾಡಿದ್ದೆವು’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.   ವಿದ್ಯಾಲಯದ 8ರಿಂದ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ 20 ವಿದ್ಯಾರ್ಥಿಗಳ ತಮಾಷೆಯ ಆಟ ಕೆಲ ಕಾಲ ಶಿಕ್ಷಕರು, ಪೋಷಕರನ್ನು ಆತಂಕಕ್ಕೆ ದೂಡಿತ್ತು. ನಿಜ ವಿಷಯ ತಿಳಿದು ಸೃಷ್ಟಿಯಾಗಿದ್ದ ಆತಂಕ ದೂರವಾಯಿತು. ಆದರೂ ಸಹ ಮುಂಜಾಗೃತ ಕ್ರಮವಾಗಿ ಚಿತ್ರ ಬಿಡಿಸಿಕೊಂಡ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಮಾಡಲಾಗಿದೆ. ( ಪಿ.ಜೆ )

 

Leave a Reply

comments

Related Articles

error: