ಮೈಸೂರು

ಮೆಟ್ಟಿಲು ಜಾರಿ ಎಡವಲಿದ್ದ ಮುಖ್ಯಮಂತ್ರಿಗಳ ಕೈಹಿಡಿದ ನಿತ್ಯೋತ್ಸವ ಕವಿ

ಮೈಸೂರು, ಸೆ.21:- ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಟ್ಟಿಲು ಜಾರಿ ಎಡವಿದ್ದು, ಕವಿ ಪ್ರೊ.ನಿಸಾರ್ ಅಹಮದ್ ಕೈಹಿಡಿದರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುರುವಾರ 8.45ರ ತುಲಾ ಲಗ್ನದಲ್ಲಿ ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ  ಸಲ್ಲಿಸಿ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಪೂಜೆ ಮುಗಿಸಿ ವಾಪಸ್ ಬರುವ ವೇಳೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಟ್ಟಿಲು ಜಾರಿ ಎಡವಿದ್ದು ಅವರ ಜೊತೆಯಿದ್ದ ನಿತ್ಯೋತ್ಸವ ಕವಿ ಪ್ರೊ.ನಿಸಾರ್ ಅಹ್ಮದ್ ಅವರ ಕೈಹಿಡಿದು ತಡೆದಿದ್ದಾರೆ. (ಆರ್.ವಿ,ಕೆ.ಎಸ್,ಎಸ್.ಎಚ್)

Leave a Reply

comments

Related Articles

error: