
ಮೈಸೂರು
ಜಿಟಿಡಿ, ಸಾರಾ ವಿದ್ಯುತ್ ಅಲಂಕಾರ ನೋಡಿ ಬನ್ನಿ ಎಂದು ಮಾತಿನಲ್ಲೇ ಕಾಲೆಳೆದ ಸಿಎಂ
ಮೈಸೂರು,ಸೆ.21:- ಈ ಬಾರಿ ದಸರಾದಲ್ಲಿ ಏರ್ ಶೋ ನಡೆದರೆ ಹೆಚ್ಚು ರಂಗು ಇರಲಿದೆ. ಈಗಾಗಲೇ ಕೇಂದ್ರಕ್ಕೆ ಈ ಕುರಿತು ಪತ್ರ ಬರೆದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ದಸರಾ ಮಹೋತ್ಸವದ ಉದ್ಘಾಟನೆಯ ವೇಳೆ ಮಾತನಾಡಿದ ಅವರು ನಿರ್ಮಲಾ ಸೀತಾರಾಮ್ ಮನೆಗೂ ಹೋಗಿ ಕೇಳಿದ್ದೇನೆ. ಪ್ರತಾಪ್ ಸಿಂಹ ನೀವು ಒಂದು ಬಾರಿ ಕೇಳಿ. ನನಗಿಂತ ನೀವು ಕೇಳಿದ್ದೆ ಸಾಧ್ಯ ಆಗುತ್ತದೆ.ಈ ಬಾರಿ ದಸರಾ ಗಣರಾಜೋತ್ಸವ ಪೆರೇಡ್ ಮಾದರಿಯಲ್ಲಿ ಇರಲಿ ಎಂದಿದ್ದೇನೆ ಎಂದರು. ದೀಪಾಲಂಕಾರದ ಕುರಿತು ಮಾತನಾಡಿದ ಅವರು ದಸರಾವನ್ನು ಸಾಂಪ್ರದಾಯಿಕವಾಗಿ ಮಾಡುತ್ತಿರುವುದರಿಂದ ವೈಭವವಲ್ಲದಿದ್ದರೂ ಆಕರ್ಷಣೆ ಯಾಗಿ ಮಾಡುತ್ತಿದ್ದೇವೆ. ವಿಶೇಷ ದೀಪಾಲಂಕಾರ ಮಾಡಲು ಹೇಳಿದ್ದೇನೆ. ಕೆಇಬಿ ಅವರು ಬಂದಿದ್ದೀರಾ. ಏನಪ್ಪಾ ಎಲ್ಲ ಕಡೆ ಎಲ್ ಇಡಿ ಬಲ್ಬ್ ಹಾಕಿಸಿದ್ದೀರಾ? ಜಿಟಿಡಿ, ಸಾರಾ ಸಂಜೆ ಒಂದು ಸುತ್ತು ಹೋಗಿ ನೋಡಿಕೊಂಡು ಬನ್ನಿ. ಇಬ್ಬರಿಗೂ ಆಗಲ್ವಾ..? ಸರಿ ಬೇರೆ ಬೇರೆಯಾಗಿಯೇ ನೋಡಿಕೊಂಡು ಬನ್ನಿ ಎಂದು ಮಾತಿನಲ್ಲೇ ಜಿ.ಟಿ.ದೇವೇಗೌಡರ ಕಾಲೆಳೆದರು. ಸಿಂಹ ನೀನು ಹೋಗಿ ನೋಡಿಕೊಂಡು ಬಾ. ಏ ತನ್ವೀರ್ ಸೇಠ್ ನೀನು ಹೋಗು ಎಂದು ತಮಾಷೆ ಮಾಡಿದರು. ಮುಖ್ಯಮಂತ್ರಿಗಳು ಇವತ್ತು ಫುಲ್ ಖುಷಿಯ ಮೂಡ್ ನಲ್ಲಿರುವುದು ಕಂಡು ಬಂತು. (ಎಂ.ಎನ್,ಎಸ್.ಎಚ್)